ಮಂಡ್ಯ: ‘ಜನಪದ ಹಾಡುಗಳನ್ನು ಹಾಡುತ್ತೇವೆಯೇ ಹೊರತು ಅದನ್ನು ಸೃಷ್ಟಿ ಮಾಡುವ ಕೆಲಸ ಆಗುತ್ತಿಲ್ಲ. ವೈಚಾರಿಕವಾಗಿ ಜಾನಪದವನ್ನು ‘ಮೇಕ್ ಇನ್ ಇಂಡಿಯಾ’ವರೆಗೂ ತೆಗೆದುಕೊಂಡು ಹೋಗುವ ಮೂಲಕ ಇತರೆ ದೇಶಗಳಿಗೆ ಸೆಡ್ಡು ಒಡೆಯಲು ಜಾನಪದಕ್ಕೆ ಪ್ರೋತ್ಸಾಹ ನೀಡಬೇಕು’ ಎಂದು ಮೈಸೂರು ಜಾನಪದ ವಿದ್ವಾಂಸ ಹಿ.ಶಿ. ರಾಮಚಂದ್ರೇಗೌಡ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ಜಾನಪದ ಪರಿಷತ್ತು, ಕರ್ನಾಟಕ ಸಂಘ, ಉದ್ದೇಶಿತ ಮಂಡ್ಯ ಕಲಾವಿದರ ಪತ್ತಿನ ಸಹಕಾರ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ನಡೆದ ವಿಶ್ವ ಜಾನಪದ ದಿನಾಚರಣೆ ಮತ್ತು ನಾಡೋಜ ಜಿ.ನಾರಾಯಣ ಸಂಸ್ಮರಣೆ ಕಾರ್ಯಕ್ರಮದಲ್ಲಿ ವಿಶ್ವ ಜಾನಪದ ದಿನ ಕುರಿತು ಅವರು ಮಾತನಾಡಿದರು.

‘ಭಾರತದಲ್ಲಿ ಮಾನವ ಸಂಪನ್ಮೂಲ ಇರುವುದರಿಂದಲೇ ವಿದೇಶದಿಂದ ಉದ್ಯಮಿಗಳು ಬರುತ್ತಿದ್ದಾರೆ. ಏಕೆಂದರೆ ನಮ್ಮನ್ನು ಬಳಸಿ ಬಿಸಾಡುತ್ತಾರೆ. ಹೀಗೆ ಬಳಸಿ ಬಿಸಾಡುವಿಕೆಯಲ್ಲಿ ಮನುಷ್ಯನಿಗೆ ಜೀವನ, ಭಾವನೆ, ಸಂಸ್ಕೃತಿ ಇರುವುದಿಲ್ಲ. ಇವೆಲ್ಲವೂ ನಾಶವಾಗುತ್ತಿರುತ್ತದೆ. ಮನುಷ್ಯ ಬದುಕುವುದು ಹಣದಿಂದ ಮಾತ್ರವಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಮುಖ್ಯವಾಗಿ ಬೇಕಿರುವುದು ಸೃಷ್ಟಿ. ಅದನ್ನು ನಾವು ಉದ್ಯಮಗಳಿಗೆ ಕೊಟ್ಟಿದ್ದೇವೆ’ ಎಂದು ವಿಷಾದಿಸಿದರು.

‘ಜನಪದ ಕಲೆಯನ್ನು ಆಧುನಿಕ ಕಲೆಯಲ್ಲಿ ಪ್ರದರ್ಶನಕ್ಕಿಟ್ಟಾಗ ಅದರ ಮೂಲ ಸ್ವರೂಪವನ್ನು ಕಳೆದುಕೊಳ್ಳಬಾರದು. ಜನಪದವನ್ನು ಸಿನಿಮಾದಲ್ಲಿ ಬಳಸಿಕೊಳ್ಳುತ್ತಾರೆ. ಆದರೆ ಅದರ ಮೂಲ ಸ್ವರೂಪ ಉಳಿಸಿಕೊಳ್ಳಬೇಕು. ಇದನ್ನು ಜನಪದ ಕಲಾವಿದರು ಮತ್ತು ತಂಡಗಳಿಗೆ ಕಾಳಜಿ ಇರಬೇಕು’ ಎಂದು ಸಲಹೆ ನೀಡಿದರು.

ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಅವರು ಜಿ.ನಾರಾಯಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಹಿರಿಯ ಜನಪದ ಕಲಾವಿದರನ್ನ ಸನ್ಮಾನಿಸಲಾಯಿತು.

ಮಾಜಿ ಶಾಸಕ ಎಂ.ಶ್ರೀನಿವಾಸ್, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ರಾಘವೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ. ನಂದೀಶ್, ಕಜಾಪ ಅಧ್ಯಕ್ಷ ಡಿ.ಪಿ. ಸ್ವಾಮಿ, ತಾಲ್ಲೂಕು ಘಟಕದ ಅಧ್ಯಕ್ಷ ಕಾರಸವಾಡಿ ಮಹದೇವ ಭಾಗವಹಿಸಿದ್ದರು.

ಜಾನಪದದ ಮೂಲಸ್ವರೂಪ ಬದಲಾಗದಿರಲಿ | ಮಾನವ ಸಂಪನ್ಮೂಲವನ್ನು ಬಳಸಿ ಬಿಸಾಡುತ್ತಿರುವ ವಿದೇಶಿ ಉದ್ಯಮಿಗಳು

‘ಜನಪದ ಕಲಾವಿದರಿಗೆ ಮನ್ನಣೆ ಸಿಗಲಿ’

ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ ‘ಡ್ಯಾನ್ಸ್ ಮಾಡುವುದಕ್ಕೆ ₹40ರಿಂದ ₹50 ಲಕ್ಷ ಕೊಡುವ ಬದಲು ಶ್ರೀರಂಗಪಟ್ಟಣ ದಸರಾ ಸಂದರ್ಭದಲ್ಲಿ ಜನಪದ ಕಲಾವಿದರನ್ನು ಬಳಸಿಕೊಳ್ಳುವಂತಾಗಲಿ. ಅವರಿಗೆ ಸಂಭಾವನೆ ಕೊಡುವುದಲ್ಲ ಅವರಿಗೆ ಗೌರವಧನ ನೀಡಿದಂತಾಗುತ್ತದೆ. ಭಾರತೀಯ ಸಂಸ್ಕೃತಿಯನ್ನು ಉಳಿಸುವ ಕಲಾವಿದರ ಬಾಳು ಚಿಂತಾಜನಕವಾಗಿದೆ. ಅವರ ಉಳಿವು ಆಗಬೇಕು. ಆಗ ಮಾತ್ರ ಜನಪದ ಸಂಸ್ಕೃತಿ ಉಳಿಸಿ– ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.