ಮಂಡ್ಯ: ಸದೃಢ ಆರೋಗ್ಯದ ಬಗ್ಗೆ ಜಾಗೃತಿ, ಮಾದಕ ವಸ್ತು ಮುಕ್ತ ಕರ್ನಾಟಕ ಹಾಗೂ ನಮ್ಮ ಪೊಲೀಸ್ ನಮ್ಮ ಹೆಮ್ಮೆ ಘೋಷಣೆಯೊಂದಿಗೆ ಮಾರ್ಚ್ 9ರಂದು ನಗರದಲ್ಲಿ ಹಾಫ್ ಮ್ಯಾರಥಾನ್ ಓಟ ಆಯೋಜಿಸಲಾಗಿದೆ.

ನಗರದ ಜಿಲ್ಲಾ ಪೊಲೀಸ್ ಭವನದಲ್ಲಿ ಟೀ ಶರ್ಟ್ ಬಿಡುಗಡೆಗೊಳಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ‘18 ವರ್ಷ ಮೇಲ್ಪಟ್ಟ ಆರೋಗ್ಯವಂತ ಸ್ಪರ್ಧಾಳುಗಳು ಮ್ಯಾರಥಾನ್ ಓಟದಲ್ಲಿ ಭಾಗವಹಿಸಬಹುದು. 5 ಕಿ.ಮೀ ಹಾಗೂ 10 ಕಿ.ಮೀ ಮ್ಯಾರಥಾನ್ ಓಟ ಸ್ಪರ್ಧೆ ನಡೆಯಲಿದೆ’ ಎಂದರು.

‘ಅಂದು ಬೆಳಿಗ್ಗೆ 6 ಗಂಟೆಯೊಳಗೆ ಎಲ್ಲರೂ ಸರ್.ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಜರಾಗಬೇಕು. ಎರಡು ವಿಭಾಗಕ್ಕೂ ಪ್ರತ್ಯೇಕ ರೂಟ್ ಮ್ಯಾಪ್ ಮಾಡಲಾಗಿದೆ. 7 ಗಂಟೆಗೆ ಆರಂಭವಾಗುವ ಓಟ ಸರ್ಎಂವಿ ಕ್ರೀಡಾಂಗಣದಲ್ಲಿಯೇ ಮುಕ್ತಾಯವಾಗಲಿದೆ’ ಎಂದರು.

‘ಈಗಾಗಲೇ 300ಕ್ಕೂ ಹೆಚ್ಚು ಜನರು ನೋಂದಣಿ ಮಾಡಿಕೊಂಡಿದ್ದಾರೆ. ಅಂತೆಯೇ 600 ಜನ ಪೊಲೀಸ್ ಅಧಿಕಾರಿ, ಸಿಬ್ಬಂದಿ ಹಾಗೂ ವಿವಿಧ ಇಲಾಖೆಯ ಅಧಿಕಾರಿ, ನೌಕರರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಇದಲ್ಲದೆ ಹಾಸ್ಟೆಲ್ ವಿದ್ಯಾರ್ಥಿಗಳು ಭಾಗವಹಿಸುವಂತೆ ಸಂಬಂಧಪಟ್ಟವರಿಗೆ ಮನವಿ ಮಾಡಲಾಗಿದೆ. ಕಲಾವಿದರಾದ ರಿಷಿ, ನವೀನ್ ಸಜ್ಜು ಭಾಗವಹಿಸಲಿದ್ದಾರೆ. ಇವರೊಟ್ಟಿಗೆ ಬಿಗ್ಬಾಸ್ ಖ್ಯಾತಿಯ ಕಲಾವಿದರು ಪಾಲ್ಗೊಳ್ಳಬಹುದು. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲರಿಗೂ ಟೀ ಶರ್ಟ್ ನೀಡಲಾಗುವುದು’ ಎಂದರು.

ಐದು ಕಿ.ಮೀ ಓಟದ ವಿಜೇತರಿಗೆ ₹ 5 ಸಾವಿರ (ಪ್ರಥಮ), ₹ 3 ಸಾವಿರ (ದ್ವಿತೀಯ) ಹಾಗೂ ₹ 2 ಸಾವಿರ (ತೃತೀಯ) ಬಹುಮಾನ ಇರಲಿದೆ. ಇನ್ನು 10 ಕಿ.ಮೀ ಓಟದ ಸ್ಪರ್ಧೆಯಲ್ಲಿ ಗೆಲ್ಲುವವರಿಗೆ ₹ 10 ಸಾವಿರ (ಪ್ರಥಮ), ₹ 5 ಸಾವಿರ (ದ್ವಿತೀಯ) ಹಾಗೂ ₹ 3 ಸಾವಿರ (ತೃತೀಯ) ಬಹುಮಾನ ನೀಡಲಾಗುವುದು. ಎಲ್ಲರೂ ಆಗಮಿಸಿ ಪೊಲೀಸರೊಂದಿಗೆ ಓಟದ ಸ್ಪರ್ಧೆಯನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.