ಕಡತದಿಂದ ಬಿಲ್‌ಗಳೇ ನಾಪತ್ತೆ!
ಕೆಲವೊಂದು ಖರೀದಿಗೆ ಸಂಬಂಧಿಸಿದ ಕಡತಗಳಲ್ಲಿ ಮೂಲ ಬಿಲ್ ಮತ್ತು ನಕಲು ಬಿಲ್ ಸಹ ಕಡತದಿಂದ ಕಾಣೆಯಾಗಿರುವುದು ಅಕ್ರಮದ ಸಂಶಯ ಕಂಡುಬಂದಿದೆ. ಕೆಲವೊಂದು ಖರೀದಿ ಪ್ರಕಟಣೆ ಹಾಗೂ ದರಪಟ್ಟಿಯಲ್ಲಿ ದಿನಾಂಕಗಳನ್ನು ತಿದ್ದುಪಡಿ ಮಾಡಲಾಗಿದೆ. ಕೆಲವು ಏಜೆನ್ಸಿಗಳು ಔಷಧ ಸರಬರಾಜಿನ ಜಿಎಸ್‌ಟಿ ಇಲ್ಲದಿದ್ದರೂ ದರಪಟ್ಟಿಯಲ್ಲಿ ಆಯ್ಕೆಯಾಗಿವೆ ಎಂದು ವರದಿಯಲ್ಲಿ ನಮೂದಿಸಲಾಗಿದೆ. ಏಪ್ರಿಲ್ 2022ರಿಂದ ಜನವರಿ 2024ರವರೆಗೆ ನಡೆದ ಬಹುತೇಕ ಖರೀದಿಗಳಿಗೆ ‘ನೀಡ್ ಅಸೆಸೆಮೆಂಟ್ ಕಮಿಟಿ’ಯಿಂದ ಅನುಮೋದನೆ ಪಡೆದಿರುವುದಿಲ್ಲ. ಎ.ಬಿ.ಎ.ಆರ್.ಕೆ ಎ.ಆರ್.ಎಸ್ ಎನ್.ಎಚ್.ಎಂ ಹಾಗೂ ಬಳಕೆದಾರರ ನಿಧಿಯಿಂದ ಖರೀದಿಸಿರುವ ವೈದ್ಯಕೀಯ ಸಲಕರಣೆ ಹಾಗೂ ಪರಿಕರಗಳ ಬಿಲ್ಲಿಗೆ ಸಂಬಂಧಿಸಿದಂತೆ ಜಿಎಸ್‌ಟಿ ಮತ್ತು ಆದಾಯ ತೆರಿಗೆ ಕಟಾವಣೆ ಮಾಡದೆ ಬಿಲ್ಲಿನ ಪೂರ್ಣ ಮೊತ್ತಕ್ಕೆ ಪಿ.ಎಫ್.ಎಂ.ಎಸ್ ಮೂಲಕ ಸಂಬಂಧಪಟ್ಟ ಸಂಸ್ಥೆಯವರಿಗೆ ಹಣ ಸಂದಾಯ ಮಾಡಿರುವುದು ತನಿಖೆಯಲ್ಲಿ ಕಂಡು ಬಂದಿದೆ.