ಮಂಡ್ಯ: ದಕ್ಷಿಣ ಭಾರತವನ್ನಾಳೀದ ಕದಂಬ, ಚಾಲುಕ್ಯ ಮತ್ತು ರಾಷ್ಟ್ರಕೂಟ ರಾಜಮನೆತನಗಳ ಕೊಡುಗೆ ಅವಿಸ್ಮರಣೀಯ ಎಂದು ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಈ.ಸಿ. ನಿಂಗರಾಜ್ಗೌಡ ಹೇಳಿದರು.

ನಗರದ ಗಾಂಧಿಭವನದಲ್ಲಿ ಕದಂಬ ಸೈನ್ಯ ಕನ್ನಡ ಸಂಘಟನೆ ಗುರುವಾರ ಆಯೋಜಿಸಿದ್ದ ಕದಂಬ-ಚಾಲುಕ್ಯ ರಾಷ್ಟ್ರಕೂಟ ಚಕ್ರವರ್ತಿಗಳ ಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಕನ್ನಡಿಗರ ಸ್ವಾಭಿಮಾನದ ರಾಜಮನೆತನವಾದ ಕದಂಬರು ಕ್ರಿ.ಶ 4ನೇ ಶತಮಾನದಲ್ಲಿ ಬನವಾಸಿಯನ್ನು ಕೇಂದ್ರವಾಗಿಟ್ಟುಕೊಂಡು ಅಭೂತಪೂರ್ವ ಆಳ್ವಿಕೆ ನಡೆಸಿ ಕೊಡುಗೆ ನೀಡಿದರು. ಚಾಲುಕ್ಯರು 6ನೇ ಶತಮಾನದಲ್ಲಿ ಬಾದಾಮಿಯನ್ನು ಕೇಂದ್ರವಾಗಿಟ್ಟುಕೊಂಡು ಆಳ್ವಿಕೆ ನಡೆಸಿದರು. ರಾಷ್ಟ್ರಕೂಟರು 8ನೇ ಶತಮಾನದಲ್ಲಿ ಗುಜರಾತ್ ಮತ್ತು ಮಹಾರಾಷ್ಟ್ರವನ್ನು ಕೇಂದ್ರವಾಗಿಟ್ಟುಕೊಂಡು ಆಳ್ವಿಕೆ ನಡೆಸಿದರು. ಈ ಮೂರು ರಾಜವಂಶಗಳು ದಕ್ಷಿಣ ಭಾರತದ ಇತಿಹಾಸದಲ್ಲಿ ಮಹತ್ವದ ಪಾತ್ರವಹಿಸಿವೆ ಎಂದು ನುಡಿದರು.

ಇಂದಿನ ವಿದ್ಯಾವಂತರು ಇತಿಹಾಸವನ್ನು ಮರೆಯಬಾರದು, ಹಿಂದಿನ ರಾಜಮನೆತನಗಳನ್ನು ಸ್ಮರಿಸಿಕೊಳ್ಳುವ ಕೆಲಸ ಆಗುತ್ತಿರುವುದು ಶ್ಲಾಘನೀಯ. ಪ್ರಾಚೀನ ದಕ್ಷಿಣ ಭಾರತದ ಪ್ರಮುಖ ರಾಜವಂಶ ಕದಂಬರದ್ದಾಗಿದ್ದು, ಸುಮಾರು ಕ್ರಿ.ಶ. 4ನೇ ಶತಮಾನದಲ್ಲಿ ಮಯೂರವರ್ಮನು ಗುರು ಹಿರಿಯರ ಸಹಾಯದೊಂದಿಗೆ ಸಾಮಾಜ್ಯವನ್ನು ಸ್ಥಾಪಿಸಿದನು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಸಮಾಜಸೇವಕ ಡಾ.ಎನ್. ನರಸಿಂಹಮೂರ್ತಿ, ವಕೀಲರ ಸಂಘದ ಮಾಜಿ ರಾಜ್ಯ ಅಧ್ಯಕ್ಷ ವಿಶಾಲ್ ರಘು, ಸಮಾಜ ಸೇವಕ ನೋಕಿಯಾ ಎಂ.ಜೆ. ಯೋಗೇಶ್, ಜೂನಿಯರ್ ಮಾಲಾಶ್ರೀ ಖ್ಯಾತಿಯ ಕೆ.ಟಿ. ಸೌಭಾಗ್ಯಾ, ಎಎಸ್ಪಿ ಸಿ.ಈ. ತಿಮ್ಮಯ್ಯ, ಹೆಚ್ಚುವರಿ ಪೊಲೀಸ್ ಅಧಿಕಾರಿ ಎನ್.ಈ. ಗಂಗಾಧರಸ್ವಾಮಿ, ವಕೀಲೆ ಆಶಾಲತಾ, ನಗರಸಭಾ ಸದಸ್ಯ ಶೀಧರ್, ಮೋಹನ್ ಚಿಕ್ಕಮಂಡ್ಯ, ಅನುಪಮಾಗೌಡ ಪಾಲ್ಗೊಂಡಿದ್ದರು.

‘ಪೊಲೀಸರ ಪಾತ್ರ ಮಹತ್ತರ’

ಕದಂಬ ಸೈನ್ಯ ಕನ್ನಡ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಬೇಕ್ರಿ ರಮೇಶ್ ಮಾತನಾಡಿ ‘ಕಾವೇರಿ ಚಳವಳಿ ಮತ್ತು ಕನ್ನಡಪರ ಹೋರಾಟಗಳಲ್ಲಿ ಹೋರಾಟಗಾರರ ರಕ್ಷಣೆ ಮಾಡುವಲ್ಲಿ ಪೊಲೀಸ್ ಇಲಾಖೆ ತನ್ನ ಪಾತ್ರವನ್ನು ಅವಿಸ್ಮರಣೀಯವಾಗಿ ನಿರ್ವಹಿಸಿದೆ. ಸಾಕಷ್ಟು ಬಾರಿ ಹೋರಾಟಗಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದರೂ ತಾಳ್ಮೆಯಿಂದ ಕರ್ತವ್ಯ ನಿಭಾಯಿಸಿದ್ದಾರೆ’ ಎಂದು ಸ್ಮರಿಸಿದರು.

ಪೊಲೀಸ್ ಇಲಾಖೆಯ ಸಾಧಕರಿಗೆ ‘ಕದಂಬ ಆರಕ್ಷಕ ಪ್ರಶಸ್ತಿ’ ಸೈನಿಕರಿಗೆ ‘ಕದಂಬ ವೀರಯೋಧರ ಪ್ರಶಸ್ತಿ’ ಸೇರಿದಂತೆ ಸಮಾಜ ಸೇವಕರಿಗೆ ಕದಂಬ- ಚಾಲುಕ್ಯ- ರಾಷ್ಟ್ರಕೂಟ ಚಕ್ರವರ್ತಿಗಳ ಸ್ಮರಣೆಯ ಹೆಸರಿನ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.