ಶ್ರೀರಂಗಪಟ್ಟಣ: ತಾಲ್ಲೂಕಿನ ಕಿರಂಗೂರು ಗ್ರಾಮದ ಬಳಿ, ಚಿಕ್ಕದೇವರಾಯಸಾಗರ ನಾಲೆಯ ವಿತರಣಾ ನಾಲೆ (ಬಿಡುಗಂಡಿ ನಾಲೆ) ಪಕ್ಕದಲ್ಲಿ ಸೋಮವಾರ 5 ಅಡಿ ಉದ್ದದ ಮೊಸಳೆ ಕಾಣಿಸಿಕೊಂಡಿದೆ.

ಗ್ರಾಮದ ಬಳಿ, ಶ್ರೀರಂಗಪಟ್ಟಣ– ಪಾಂಡವಪುರ ರಸ್ತೆ ಪಕ್ಕದ ವಿತರಣಾ ನಾಲೆ ಸಮೀಪದ ಮನೆಯ ಬಳಿಯಲ್ಲೇ ಮೊಸಳೆ ಕಂಡು ಬಂದಿದ್ದು, ಜನರು ಭಯ ಭೀತರಾಗಿದ್ದಾರೆ. ಜನರ ಗುಂಪು ಹೆಚ್ಚಾದ ಬಳಿಕ ಅದು ನಾಲೆಗೆ ಜಿಗಿಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

‘ಕಿರಂಗೂರು ಗ್ರಾಮದ ಬಳಿ ಮೊಸಳೆ ಕಾಣಿಸಿಕೊಂಡಿರುವ ವಿಷಯ ಗೊತ್ತಾಗಿಲ್ಲ. ಈ ಬಗ್ಗೆ ಇದುವರೆಗೆ ಯಾವುದೇ ದೂರು ಬಂದಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಲಾಗುವುದು. ಮೊಸಳೆ ಕಾಣಿಸಿಕೊಂಡಿರುವ ಸ್ಥಳದಲ್ಲೇ ಇದ್ದರೆ ಅದನ್ನು ಹಿಡಿದು ದೂರ ಪ್ರದೇಶಕ್ಕೆ ಬಿಡಲಾಗುವುದು’ ಎಂದು ಉಪ ವಲಯ ಅರಣ್ಯಾಧಿಕಾರಿ ಬಿ.ಎಂ. ನಾಗರಾಜ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.