ಕೆ.ಆರ್.ಪೇಟೆ| ತೋಟದ ಮನೆಗೆ ನುಗ್ಗಿದ ಚಿರತೆ

ಮಂಡ್ಯ: ಕೆ.ಆರ್.ಪೇಟೆ ತಾಲ್ಲೂಕು ಮೂಡನಹಳ್ಳಿ ಗ್ರಾಮದ ತೋಟದ ಮನೆಯೊಂದಕ್ಕೆ ಬುಧವಾರ ರಾತ್ರಿ ಚಿರತೆ ನುಗ್ಗಿದೆ.
ಗ್ರಾಮದ ರೈತ ನಿಂಗೇಗೌಡರು ಜಾನುವಾರು ಕಟ್ಟುವ ಉದ್ದೇಶದಿಂದ ತೋಟದ ಮನೆ ಮಾಡಿಕೊಂಡಿದ್ದರು.
ಗುರುವಾರ ಬೆಳಿಗ್ಗೆ ಮನೆಗೆ ಬಂದ ನಿಂಗೇಗೌಡರು ಮನೆಯೊಳಗೆ ಶಬ್ದವಾಗುತ್ತಿರುವುದನ್ನು ಕೇಳಿಸಿಕೊಂಡಿದ್ದಾರೆ. ಕಿಟಕಿ ತೆರದು ನೋಡಿದಾಗ ಚಿರತೆ ಇರುವುದನ್ನು ಗಮನಿಸಿದ್ದಾರೆ.
ಗ್ರಾಮಸ್ಥರ ನೆರವು ಪಡೆದು ಅವರು ಮನೆಯ ಎರಡೂ ಬಾಗಿಲು ಮುಚ್ಚಿಸಿ ಚಿರತೆಯನ್ನು ಕೂಡಿಹಾಕಿದ್ದಾರೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಅಧಿಕಾರಿಗಳ ಬರುವಿಕೆಗಾಗಿ ಗ್ರಾಮಸ್ಥರು ಕಾಯುತ್ತಿದ್ದಾರೆ.
ಚಿರತೆ ಒಳಗಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.