ಕೆ.ಆರ್. ಪೇಟೆ: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಅದರೊಂದಿಗೆ ಹೊಂಡ–ಗುಂಡಿಗಳಿಂದ ತುಂಬಿದ ರಸ್ತೆಯಿಂದ ಜನರು ಸಂಕಟಪಡುವ ಸ್ಥಿತಿ ಉಂಟಾಗಿದೆ.

ಪಟ್ಟಣದಲ್ಲಿ ಎಲ್ಲೆಂದರಲ್ಲಿ ಅಲ್ಲಿ ಬೀದಿನಾಯಿಗಳು ಹಿಂಡು ಹಿಂಡಾಗಿ ಓಡಾಡುತ್ತಿದ್ದರೂ ಅವುಗಳ ನಿಯಂತ್ರಣಕ್ಕೆ ಪುರಸಭೆ ಕ್ರಮ ಕೈಗೊಳ್ಳದಿರುವುದು ಪಟ್ಟಣದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಒಂದು ದಿನ ಒಂದು ಬಡಾವಣೆಯಲ್ಲಿರುವ ನಾಯಿಗಳು, ಮತ್ತೊಂದು ದಿನ ತಮ್ಮ ವಾಸವನ್ನು ಮತ್ತೊಂದು ಬಡಾವಣೆಗೆ ಸ್ಥಳಾಂತರಿಸಿ ತೊಂದರೆ ಕೊಡಲು ಆರಂಭಿಸಿವೆ. ಇದರಿಂದಾಗಿ ಪಟ್ಟಣಕ್ಕೆ ಬರುವವರು ಮತ್ತು ಪಟ್ಟಣದಲ್ಲಿರುವ ಹಿರಿಯ ನಾಗರಿಕರು, ವಾಹನ ಸವಾರರು, ಶಾಲಾ ಮಕ್ಕಳು ರಸ್ತೆಯಲ್ಲಿ ಓಡಾಡಲು ಭಯಪಡುವ ಸ್ಥಿತಿ ಇದೆ.

ಪುರಸಭೆಯವರು ಈ ನಿಟ್ಟಿನಲ್ಲಿ ಕ್ರಮ ವಹಿಸಿ ಪಟ್ಟಣದಿಂದ ಬೀದಿನಾಯಿಗಳನ್ನು ಸ್ಥಳಾಂತರಿಸುವ ಇಲ್ಲವೆ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಲು ಕ್ರಮ ವಹಿಸಬೇಕೆಂದು ನಾಗರಿಕ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಕೆ.ಎಸ್.ಸುರೇಶ್ ಒತ್ತಾಯಿಸಿದ್ದಾರೆ.

ಪಟ್ಟಣದ ದೊಡ್ಡ ಬಡಾವಣೆಯಾದ ಜಯನಗರ ಬಡಾವಣೆ ಸೇರಿದಂತೆ ಪ್ರವಾಸಿಮಂದಿರದ ಬಳಿ, ಮೈಸೂರು ರಸ್ತೆ, ಹೊಸ ಮತ್ತು ಹಳೆ ಕಿಕ್ಕೇರಿ ರಸ್ತೆ, ದುರ್ಗಾ ಭವನ್ ರಸ್ತೆ, ಅಗ್ರಹಾರ, ಜಯನಗರ, ಸುಭಾಶ್ ನಗರ ವಿವಿಧ ಬಡಾವಣೆಗಳಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು ಜನರು ಪರದಾಡುವಂತಾಗಿದೆ. ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರವಾಹನ ಸವಾರರು, ಪಾದಾಚಾರಿಗಳು ಎಲ್ಲಿ ನಾಯಿಗಳು ಎರಗಿ ಬಿಡುತ್ತದೆಯೋ ಎಂಬ ಭಯದಿಂದಲೇ ಓಡಾಡಬೇಕಾದ ಪರಿಸ್ಥಿತಿ ಇದ್ದು ಕ್ರಮ ವಹಿಸಬೇಕೆಂದು ಪುರಸಭಾ ಸದಸ್ಯ ಎಚ್.ಆರ್.ಲೋಕೇಶ್ ಒತ್ತಾಯಿಸಿದರು.

ಪಟ್ಟಣದ ಸಾರ್ವಜನಿಕರ ಸಮಸ್ಯೆ ಗಮನಕ್ಕೆ ಬಂದಿದೆ. ಪಟ್ಟಣದಲ್ಲಿ ಸ್ವಚ್ಚತೆ ಕಾಪಾಡಲು ಮತ್ತು ಬೀದಿನಾಯಿಗಳ ನಿಯಂತ್ರಣಕ್ಕೆ ತರಲು ಅಧಿಕಾರಿಗಳಿಗೆ ಸೂಚಿಸಿದ್ದು ಅವರು ಕ್ರಮ ಕೈಗೊಳ್ಳುತಿದ್ದಾರೆ
ಪಂಕಜಾ ಪ್ರಕಾಶ್ ಪುರಸಭಾ ಅಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.