ಕೆ.ಆರ್.ಪೇಟೆ: ‘ಆಟೊ ಚಾಲಕರು, ಬೀದಿಬದಿ ವ್ಯಾಪಾರಿಗಳು ಕನ್ನಡಭಾಷೆ ಕಟ್ಟುವ ಕಾರ್ಯ ಮಾಡುತ್ತಿದ್ದು, ಅವರ ಉತ್ತಮ ಕೆಲಸ ಕಾರ್ಯಗಳಿಗೆ ಬೆಂಗಾವಲಾಗಿ ನಿಲ್ಲುತ್ತೇನೆ’ ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.

ಡಾ. ಎಪಿಜೆ ಅಬ್ದುಲ್ ಕಲಾಂ ಅಭಿಮಾನಿ ಬಳಗ ಮತ್ತು ಚಾಮುಂಡೇಶ್ವರಿ ಬೀದಿ ವ್ಯಾಪಾರಿಗಳ ಸಂಘದಿಂದ ಶನಿವಾರ ಆಯೋಜಿಸಿದ್ದ 70ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಭಾಷೆಯನ್ನು ಕಟ್ಟುವವರಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕಾದುದು ನಮ್ಮ ಕರ್ತವ್ಯ, ನಾಡು, ನುಡಿಗೆ ಪ್ರಾಚೀನ ಕಾಲದಿಂದಲೂ ಪೋಷಣೆ ದೊರೆತಿದ್ದು, ಅದು ಮುಂದುವರಿಯುತ್ತಿದೆ. ರಾಜ್ಯದಲ್ಲಿರುವ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗವಕಾಶ ಸಿಗಬೇಕು’ ಎಂದು ಆಗ್ರಹಿಸಿದರು.

ಯೋಧ ಕಾರ್ತಿಕ್ ಧ್ವಜಾರೋಹಣ ನೆರವೇರಿಸಿದರು. ಆರ್ಟಿಒ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಶೀಳನೆರೆ ಅಂಬರೀಶ್ ಮಾತನಾಡಿದರು. ಮುಖಂಡರಾದ ಡಿ. ಪ್ರೇಮಕುಮಾರ್, ಎಚ್.ಆರ್ ಲೋಕೇಶ್, ಎ.ಬಿ. ಕುಮಾರ್ ಹೊನ್ನೇನಹಳ್ಳಿ ವೇಣು, ಶ್ರೀನಿವಾಸ್, ಸಮೀರ್, ಜಾವಿದ್, ಎಬಿಸಿ ಮಂಜು, ಐನೂರಳ್ಳಿ ಮಲ್ಲೇಶ್, ಕಾಡುಮೆಣಸ ಚಂದ್ರು, ಪುಟ್ಟಣ್ಣ ಭಾಗವಹಿಸಿದ್ದರು.

- ಹಣ ಪಡೆದಿದ್ದು ಸಾಬೀತು ಮಾಡಿದರೆ ಆತ್ಮಹತ್ಯೆಗೂ ಸಿದ್ಧ ಹಣ ಪಡೆದಿರುವುದನ್ನು ಸಾಬೀತುಪಡಿಸಿದರೆ ಶಾಸಕನಾಗಿ ನಾನು ಕತ್ತೆ ಮೇಲೆ ಕುಳಿತು ಆರೋಪ ಮಾಡಿದವರಿಂದ ಮೆರವಣಿಗೆ ಮಾಡಿಸಿಕೊಳ್ಳುತ್ತೇನೆ ನನ್ನ ಮೇಲಿನ ಆರೋಪ ಸುಳ್ಳಾಗಿದ್ದರೆ ಅವರು ಕತ್ತೆಯ ಮೇಲೆ ಕುಳಿತು ಮೆರವಣಿಗೆ ಮಾಡಿಸಿಕೊಳ್ಳುತ್ತಾರೆಯೇ ಎಂದು ಶಾಸಕ ಎಚ್.ಟಿ.ಮಂಜು ಸವಾಲು ಹಾಕಿದರು. ಎಂಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಧರಣೇಶ್ ಅವರಿಂದ ಶಾಸಕರು ಹಣ ಪಡೆದಿದ್ದಾರೆ ಎಂದು ಜನಪ್ರತಿನಿಧಿಯೊಬ್ಬರು ಮೊಬೈಲ್ ಫೋನ್ನಲ್ಲಿ ಮಾತನಾಡಿರುವುದು ಹರಿದಾಡಿರುವ ವಿಷಯ ಕುರಿತು ಅವರು ಸ್ಪಷ್ಟನೆ ನೀಡಿದರು. ‘₹3 ಕೋಟಿಗೂ ಹೆಚ್ಚು ಹಣ ಪಡೆದು ಅದರಿಂದ ಹೊಸ ಕಾರು ಕೊಂಡಿದ್ದೇನೆ ಎಂದು ಸುಳ್ಳು ಮಾತನಾಡಿರುವದು ಜನಪ್ರತಿನಿಧಿಯೊಬ್ಬರಿಗೆ ಉತ್ತಮ ಲಕ್ಷಣವಲ್ಲ. ನಮ್ಮ ಅಭ್ಯರ್ಥಿ ಕೇವಲ ಒಂದು ಮತದ ಅಂತರದಿಂದ ಪರಾಜಿತರಾಗಿದ್ದಾರೆ ನಾನು ನಮ್ಮ ಅಭ್ಯರ್ಥಿಯಿಂದ ಹಣ ಪಡೆದಿಲ್ಲ ಎಂದು ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಪ್ರಮಾಣ ಮಾಡುತ್ತೇನೆ ಅಲ್ಲದೆ ಆತ್ಮಹತ್ಯೆಗೂ ನಾನು ಸಿದ್ಧನಾಗಿದ್ದು ನನ್ನ ವಿರುದ್ಧ ವ್ಯವಸ್ಥಿತ ಸುಳ್ಳು ಆರೋಪ ಮಾಡಿದವರು ಇದಕ್ಕೆ ಸಿದ್ಧರಿದ್ದಾರೆಯೇ’ ಎಂದು ಸವಾಲು ಹಾಕಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.