ಸೋಮವಾರ, ಜೂಲೈ 13, 2020
25 °C

ಮಂಡ್ಯ ಜಿಲ್ಲೆಗೆ ಸರ್ಕಾರವೇ ಸೋಂಕು ಹರಡುತ್ತಿದೆ: ಕುಮಾರಸ್ವಾಮಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರ್ಕಾರವೇ ಈ ಹಿಂದೆ ರಾಮನಗರಕ್ಕೆ ಕೊರೊನಾವೈರಸ್‌ ತಂದಿಟ್ಟಿತ್ತು. ಈಗ ಮಂಡ್ಯಕ್ಕೆ ತಂದಿದೆ. ಮುಂಬೈಯಿಂದ ಸೋಂಕನ್ನು ತರುವ ಮೂಲಕ ಗ್ರೀನ್‌ಜೋನ್‌ನಲ್ಲಿದ್ದ ಜಿಲ್ಲೆಗೆ ಸರ್ಕಾರವೇ ಸೋಂಕು ಹರಡುತ್ತಿದೆ. ಇದರ ಹಿಂದೆ ರಾಜಕೀಯ ನಡೆಯುತ್ತಿರುವ ಶಂಕೆ ಇದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು

ಮಂಡ್ಯಕ್ಕೆ ತಂದ ಮೃತ ವ್ಯಕ್ತಿಯ ಶವದ ಜೊತೆ ಬಂದವರಲ್ಲಿ ಐವರಿಗೆ ಕೋವಿಡ್–19 ದೃಢಪಟ್ಟಿದೆ. ಮಂಡ್ಯ ಜಿಲ್ಲೆಗೆ ಮುಂಬೈಯಿಂದ 7-8 ಸಾವಿರ ಮಂದಿ ಬಂದಿದ್ದಾರೆ. ಅವರನ್ನು ಸರಿಯಾದ ರೀತಿಯಲ್ಲಿ ಕ್ವಾರಂಟೈನ್ ಮಾಡಿಲ್ಲ. ಮಂಡ್ಯದ ಜನರು ಸಂಕಷ್ಟಕ್ಕೆ ಸಿಲುಕುವ ದಿನಗಳು ಬರಲಿವೆ. ಜಿಲ್ಲಾಡಳಿತದ ನಿರ್ಲಕ್ಷ್ಯ ಮನೋಭಾವವೇ ಕೊರೊನಾವೈರಸ್ ಹರಡಲು ಕಾರಣವಾಗಲಿದೆ ಎಂದು ಶುಕ್ರವಾರ ದೇವನಹಳ್ಳಿ ಪಟ್ಟಣದಲ್ಲಿ ದೂರಿದರು.

ಮೃತರು ಕೊರೊನಾದಿಂದ ಸತ್ತಿದ್ದಾರೋ ಇಲ್ಲವೋ ಎಂಬುದು ತಿಳಿದಿಲ್ಲ. ಆದರೆ, ನಕಲಿ ದಾಖಲೆ ಸೃಷ್ಟಿಸಿ ಮೃತದೇಹವನ್ನು ತರಲಾಗಿದೆ. ಸರ್ಕಾರ ಇಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ. ರಾಜ್ಯದಲ್ಲಿ ಈ ರೀತಿ ಸಮಸ್ಯೆಗಳು ಉಂಟಾಗಬಾರದು ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು