ಮಳವಳ್ಳಿ: ಅಕ್ರಮವಾಗಿ ಖಾತೆ ಮಾಡಿಸಿಕೊಂಡು ಒತ್ತುವರಿ ಮಾಡಿಕೊಳ್ಳಲಾಗಿದ್ದ ಸಾವಿರಾರು ಎಕರೆ ಸರ್ಕಾರಿ ಗೋಮಾಳ, ಜಮೀನುಗಳನ್ನು ಉಪವಿಭಾಗಾಧಿಕಾರಿಯ ಆದೇಶದನ್ವಯ ತಾಲ್ಲೂಕು ಆಡಳಿತ ಸರ್ಕಾರದ ಸುಪರ್ದಿಗೆ ಪಡೆಯುತ್ತಿದ್ದು, ಅಕ್ರಮ ಖಾತೆ ಪ್ರಕರಣ ತಾರ್ಕಿಕ ಅಂತ್ಯದತ್ತ ಸಾಗಿದೆ.

ತಹಶೀಲ್ದಾರ್ ಎಸ್.ವಿ.ಲೋಕೇಶ್ ಮಾರ್ಗದರ್ಶನದಲ್ಲಿ ಕಂದಾಯ ನಿರೀಕ್ಷಕರಾದ ಎಂ.ಪಿ.ರವಿಶಂಕರ್, ಯೋಗೇಶ್, ಎಂ.ಪಿ.ರವಿಕುಮಾರ್, ಗ್ರಾಮ ಲೆಕ್ಕಾಧಿಕಾರಿಗಳಾದ ಮಧು, ಶಿವಪ್ಪ ಅವರ ತಂಡ ಒಂದು ವಾರದಿಂದ ಕಾರ್ಯಾಚರಣೆ ನಡೆಸಿ ಚೊಟ್ಟನಹಳ್ಳಿ, ಹೆಬ್ಬಣಿ, ಕದಬಳ್ಳಿ, ಧನಗೂರು ಸೇರಿದಂತೆ ಹಲವು ಗ್ರಾಮಗಳಲ್ಲಿ 70ಕ್ಕೂ ಹೆಚ್ಚು ಎಕರೆ ಭೂಮಿಯನ್ನು ತಾಲ್ಲೂಕು ಆಡಳಿತ ಮರು ವಶಪಡಿಸಿದೆ. ಮತ್ತೆ ಒತ್ತುವರಿ ಮಾಡಿದವರನ್ನು ಶಿಕ್ಷೆ ಗುರಿಪಡಿಸಲಾಗುವುದು ಎಂಬ ಎಚ್ಚರಿಕೆ ನೀಡಿದೆ.

ತಾಲ್ಲೂಕಿನಲ್ಲಿ ಹಲವು ವರ್ಷಗಳಿಂದ ವಿವಿಧೆಡೆ ಗೋಮಾಳ, ಹುಲುಬನ್ನಿ, ಗುಂಡುತೋಪು ಸೇರಿದಂತೆ ಸಾವಿರಾರು ಎಕರೆ ಸರ್ಕಾರಿ ಜಮೀನುಗಳನ್ನು ಅಕ್ರಮವಾಗಿ ಖಾತೆ ಸೃಷ್ಟಿಸಿ ಬಲಾಢ್ಯರಿಗೆ ಖಾತೆ ಮಾಡಿಕೊಟ್ಟಿರುವ ಬಗ್ಗೆ ಸಾಕಷ್ಟು ಆರೋಪ ಕೇಳಿ ಬಂದಿದ್ದವು. ಶಾಸಕ ಪಿ.ಎಂ. ನರೇಂದ್ರಸ್ವಾಮಿ ಮುಖ್ಯಮಂತ್ರಿಯನ್ನು ಖುದ್ದು ಭೇಟಿ ಮಾಡಿ ತನಿಖೆ ನಡೆಸುವಂತೆ ಮನವಿ ಮಾಡಿದ್ದರು.

2024ರ ಹಿಂದಿನ ಐದು ವರ್ಷಗಳ ಅವಧಿಯಲ್ಲಿನ ಅಕ್ರಮಗಳ ಬಗ್ಗೆ ತನಿಖೆ ನಡೆಸಲು 2024ರ ಜುಲೈ 26ರಂದು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 12(2), ಕಲಂ 195 ಹಾಗೂ ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ 2011ರ ಕಲಂ 8ರ ಅಡಿಯಲ್ಲಿ ಅಧಿಕಾರಿಗಳನ್ನು ನೇಮಿಸಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.

ತನಿಖೆಯಲ್ಲಿ 414 ಪ್ರಕರಣಗಳಿಗೆ ಸಂಬಂಧಿಸಿ 583 ಎಕರೆ ಜಮೀನಿನ ಪಹಣಿಯಲ್ಲಿ ಅನಧಿಕೃತ 776 ಹೆಸರು ಸೇರಿಸಿರುವ ಅಂಶ ಪತ್ತೆಯಾಗಿತ್ತು. ಪ್ರಕರಣದಲ್ಲಿ ಭಾಗಿಯಾಗಿದ್ದ ಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಅಮಾನತುಗೊಳಿಸಿ, ಕೆಲವರನ್ನು ವರ್ಗಾವಣೆ ಮಾಡಲಾಗಿದೆ.

ಸರ್ಕಾರ ಹಾಗೂ ಉಪವಿಭಾಗಾಧಿಕಾರಿ ಆದೇಶದಂತೆ ಒತ್ತುವರಿ ತೆರವು ಮಾಡಲಾಗುತ್ತಿದೆ. ಕೆಲವರು ತಂದಿರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ಕಾನೂನು ಕ್ರಮ ವಹಿಸಲಾಗುವುದು
ಎಸ್.ವಿ.ಲೋಕೇಶ್, ತಹಶೀಲ್ದಾರ್, ಮಳವಳ್ಳಿ

321 ಎಕರೆ ವಶಕ್ಕೆ ಆದೇಶ

ಮಳವಳ್ಳಿ ತಾಲ್ಲೂಕಿನ ಅರ್ಜಿದಾರರಿಂದ ಅರ್ಜಿಯು ಸ್ವೀಕೃತವಾಗದ, ಸಕ್ಷಮ ಪ್ರಾಧಿಕಾರದಿಂದ ಆದೇಶ ಹಾಗೂ ಅನುಮೋದನೆ ಇಲ್ಲದ, ಎಂ.ಆರ್.ಟಿ. ಕಡತ ಲಭ್ಯವಿಲ್ಲದ 321 ಎಕರೆ ಪ್ರದೇಶದ ಖಾತೆಗಳನ್ನು ರದ್ದುಪಡಿಸುವಂತೆ ತಹಶೀಲ್ದಾರ್ ಸಲ್ಲಿಸಿದ ಪ್ರಸ್ತಾವನೆಯಂತೆ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ಅವರು ಅವುಗಳನ್ನು ತಾಲ್ಲೂಕು ಆಡಳಿತದ ವಶಕ್ಕೆ ಪಡೆಯುವಂತೆ ಆದೇಶಿಸಿದ್ದಾರೆ.

ಒಂದು ವಾರ ಕಾರ್ಯಾಚರಣೆ ನಡೆಸಿರುವ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ 70ಕ್ಕೂ ಅಧಿಕ ಎಕರೆ ಜಮೀನಿಗೆ ಸರ್ಕಾರಿ ನಾಮಫಲಕ ಹಾಕಿ ವಶಕ್ಕೆ ಪಡೆಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.