ಪಿ.ಜಿ. ಕೋರ್ಸ್‌ಗಳ ಶುಲ್ಕವನ್ನು ಕಡಿಮೆ ಮಾಡಿ ವಿದ್ಯಾರ್ಥಿನಿಯರಿಗೆ ರಿಯಾಯಿತಿ ದರದಲ್ಲಿ ಶಿಕ್ಷಣ ನೀಡಬೇಕು ಹಾಗೂ ಎಂ.ಸಿ.ಎ. ಸೇರಿದಂತೆ ಬಹು ಬೇಡಿಕೆಯ ಕೋರ್ಸ್‌ಗಳನ್ನು ಆರಂಭಿಸುವ ಬಗ್ಗೆ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಲಾಗಿದೆ. 100 ವಿದ್ಯಾರ್ಥಿನಿಯರ ಸಾಮರ್ಥ್ಯದ ‘ಹಿಂದುಳಿದ ವರ್ಗಗಳ ಹಾಸ್ಟೆಲ್’ ಆರಂಭಕ್ಕೆ ಆಡಳಿತಾತ್ಮಕ ಮಂಜೂರಾತಿ ಸಿಕ್ಕಿದೆ. ಶಿಕ್ಷಕ ತರಬೇತಿಯ ಇಂಟಿಗ್ರೇಟೆಡ್ ಕೋರ್ಸ್ ಆರಂಭಿಸಲು ಚಿಂತನೆ ನಡೆದಿದೆ. ಈ ಎಲ್ಲ ಕ್ರಮಗಳು ಅನುಷ್ಠಾನಗೊಂಡರೆ ವಿದ್ಯಾರ್ಥಿನಿಯರನ್ನು ಪಿ.ಜಿ.ಸೆಂಟರ್‌ನತ್ತ ಆಕರ್ಷಿಸಬಹುದು ಎಂದು ಅಕ್ಕಮಹಾದೇವಿ ಮಹಿಳಾ ವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿಶೇಷಾಧಿಕಾರಿ ವಿಷ್ಣು ಎಂ.ಶಿಂಧೆ ಹೇಳಿದರು.