ಮಂಡ್ಯ: ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಆಯೋಜಿಸಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆ ಪಥಸಂಚಲನದಲ್ಲಿ ಇಲಾಖಾ ತಂಡಗಳ ವಿಭಾಗದಲ್ಲಿ ಅಗ್ನಿಶಾಮಕ ದಳ ಪ್ರಥಮ, ಅಬಕಾರಿ ಇಲಾಖೆ ದ್ವಿತೀಯ ಹಾಗೂ ಗೃಹರಕ್ಷಕದಳ ತೃತೀಯ ಬಹುಮಾನ ಪಡೆದವು.

ಎನ್.ಸಿ.ಸಿ ವಿಭಾಗದಲ್ಲಿ ಮಂಡ್ಯ ವಿಶ್ವವಿದ್ಯಾಲಯ ತಂಡ ಪ್ರಥಮ, ಪಿ.ಇ.ಎಸ್ ಕಾಲೇಜಿನ ತಂಡ ದ್ವಿತೀಯ, ಅನಿಕೇತನ ಪ್ರೌಢಶಾಲೆಯ ತಂಡ ತೃತೀಯ ಬಹುಮಾನ ಪಡೆದವು.

ಸ್ಕೌಟ್ಸ್ ಅಂಡ್ ಗೈಡ್ಸ್ ವಿಭಾಗದಲ್ಲಿ ಸೇಂಟ್ ಜೋಸೆಫ್ ಬಾಲಕಿಯರ ಪ್ರೌಢಶಾಲೆ ಪ್ರಥಮ, ಪೊಲೀಸ್ ಕಾಲೊನಿ ಪ್ರೌಢಶಾಲೆ ದ್ವಿತೀಯ ಬಹುಮಾನ ಪಡೆದಿದೆ.

ಪಿಯು ಕಾಲೇಜು ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಪಿ.ಇ.ಎಸ್ ಪ್ರೌಢಶಾಲೆಯ ಬಾಲಕರ ತಂಡ ಪ್ರಥಮ, ಸೇಂಟ್ ಜೋಸೆಫ್ ಪ್ರೌಢಶಾಲೆಯ ಬಾಲಕಿಯರ ತಂಡ ದ್ವಿತೀಯ, ಕಾರ್ಮೆಲ್ ಕಾನ್ವೆಂಟ್ ಪ್ರೌಢಶಾಲೆಯ ಬಾಲಕಿಯರ ತಂಡ ತೃತೀಯ ಹಾಗೂ ಎಂಇಎಸ್ ಪ್ರೌಢಶಾಲೆಯ ಬಾಲಕಿಯರ ತಂಡ ಸಮಾಧಾನಕರ ಬಹುಮಾನ ಪಡೆದಿದೆ.

ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕಾರ್ಮೆಲ್ ಕಾನ್ವೆಂಟ್ ಬಾಲಕಿಯರ ಇಂಗ್ಲಿಷ್ ಮಾಧ್ಯಮ ತಂಡ ಪ್ರಥಮ, ಸೇಂಟ್ ಜೋಸೆಫ್ ಪ್ರಾಥಮಿಕ ಶಾಲೆಯ ಬಾಲಕಿಯರ ತಂಡ ದ್ವಿತೀಯ ಹಾಗೂ ಅಭಿನವ ಭಾರತಿ ಬಾಲಕರ ತಂಡ ತೃತೀಯ ಬಹುಮಾನ ಪಡೆದಿದೆ.

ಮನಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ:

ಕಾರ್ಮಲ್ ಪ್ರೌಢಶಾಲೆ, ರೋಟರಿ ಪ್ರೌಢಶಾಲೆ, ಅಭಿನವ ಭಾರತಿ ವಿದ್ಯಾಕೇಂದ್ರ, ಅನಿಕೇತನ ಪ್ರೌಢಶಾಲೆ ಹಾಗೂ ಮಾಂಡವ್ಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು. ಭಾರತಾಂಬೆ ನಿನ್ನ ಜನುಮದಿನ, ಚಕ್ ದೇ ಇಂಡಿಯಾ, ಜೈ ಹೋ ಮುಂತಾದ ದೇಶಭಕ್ತಿ ಗೀತೆಗಳಿಗೆ ವಿದ್ಯಾರ್ಥಿಗಳು ನೃತ್ಯರೂಪಕ ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸಿದರು.

2025- 26ನೇ ಸಾಲಿನಲ್ಲಿ ಮೌಲನಾ ಅಬ್ದುಲ್ ಕಲಾಂ ಅಜಾದ್ ಪ್ರತಿಭಾ ಪುರಸ್ಕಾರ ಯೋಜನೆಯಡಿ ಅತಿ ಹೆಚ್ಚು ಅಂಕ ಪಡೆದ ಎಸ್ಎಸ್ಎಲ್ಸಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಾದ ಜುಬಿಯಾ ಖಾನಂ, ಅದಿಬಾ ಫಾತೀಮಾ, ಅಭಿಗೈಲ್ ಗ್ರೈಸ್ ಹಾಗೂ ರೋಹಿತ್ ಗೌತಮ್ ಕೆ. ಅವರಿಗೆ ₹10 ಸಾವಿರ ನಗದು ಬಹುಮಾನ ಹಾಗೂ ಪಿಯುಸಿ ವಿದ್ಯಾರ್ಥಿನಿ ಶಫೀಯಾ ಬಾನು ಅವರಿಗೆ ₹15 ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಅಂಗಾಂಗ ದಾನ ಮಾಡಿದ ಶ್ರೀರಂಗಪಟ್ಟಣ ತಾಲ್ಲೂಕಿನ ಕಾರ್ತಿಕ್ ಹಾಗೂ ಕೆ.ಆರ್.ಪೇಟೆ ತಾಲ್ಲೂಕಿನ ರಘು ಎನ್. ಅವರ ಕುಟುಂಬಸ್ಥರನ್ನು ಗೌರವಿಸಲಾಯಿತು.

ಲ್ಯಾಪ್ಟಾಪ್ ವಿತರಣೆ:

ಮಂಡ್ಯ ದಕ್ಷಿಣ ಹಾಗೂ ಉತ್ತರ ವಲಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ವಿನಯ್ ಎಚ್.ಕೆ, ವೇದಿಕಾ ಮಹೇಶ್, ಹರ್ಷಿತಾ ಎಸ್., ದಿಶಾ ಕೆ, ಹರ್ಷಿತಾ ಜೆ., ಲಕ್ಷ್ಮಿ, ಕವಿತಾ, ಮಮತಾ ಹಾಗೂ ಸಂಜನಾ ಅವರಿಗೆ ಲ್ಯಾಪ್ಟಾಪ್ ವಿತರಿಸಲಾಯಿತು.

ಪಥಸಂಚಲನದಲ್ಲಿ 38 ತಂಡಗಳು ಭಾಗಿ ಅಂಗಾಂಗ ದಾನ ಮಾಡಿದ ಕುಟುಂಬಸ್ಥರಿಗೆ ಸನ್ಮಾನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.