ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ | ಬೆಲೆ ಇಳಿಕೆ ಕಂಡ ಬೀನ್ಸ್‌, ಗೆಡ್ಡೆಕೋಸು

ತರಕಾರಿ ಬೆಳೆಗೆ ನೆರವಾದ ಮಳೆ, ಕೊತ್ತಂಬರಿ ಸೊಪ್ಪು ದರ ಏರಿಕೆ
Published 11 ಜೂನ್ 2024, 14:06 IST
Last Updated 11 ಜೂನ್ 2024, 14:06 IST
ಅಕ್ಷರ ಗಾತ್ರ

ಮಂಡ್ಯ: ಗಗನಕ್ಕೇರಿದ್ದ ಬೀನ್ಸ್‌, ಗೆಡ್ಡೆಕೋಸಿನ ಬೆಲೆ ಸದ್ಯಕ್ಕೆ ಇಳಿಕೆ ಕಂಡಿದ್ದು, ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ. ಆದರೆ, ನಾಟಿ ಕೊತ್ತಂಬರಿ ಸೊಪ್ಪು ದುಬಾರಿಯಾಗಿರುವುದರಿಂದ ಕೊಂಡುಕೊಳ್ಳಲು ಪರಿತಪಿಸುವಂತಾಗಿದೆ.

ಬೀನ್ಸ್‌ ಕೆ.ಜಿ.ಗೆ ₹200ರಿಂದ ₹220ರವರೆಗೂ ಬೆಲೆ ಹೆಚ್ಚಳದಂತೆ ಕಾಣುತ್ತಿತ್ತು. ಆದರೆ ಕಳೆದ ಒಂದು ವಾರದಿಂದ ₹100ಕ್ಕೆ ಬೆಲೆ ಕುಸಿದಿರುವುದರಿಂದ ಗ್ರಾಹಕರು ಸ್ವಲ್ಪ ನಿರಾಳರಾಗಿದ್ದಾರೆ. ಅದರಂತೆ ಗೆಡ್ಡೆಕೋಸು ಸಹ ಬೆಲೆ ಹೆಚ್ಚಳವಾಗಿತ್ತು ಎನ್ನುವುದು ಇಲ್ಲಿ ಗಮನಾರ್ಹ. ನಾಟಿ ಕೊತ್ತಂಬರಿ ಒಂದು ಕಂತೆಗೆ ₹80 ಇದ್ದು, ಸದ್ಯಕ್ಕೆ ಫಾರಂ ಕೊತ್ತಂಬರಿ ₹50ಕ್ಕೆ ಸಿಗುತ್ತಿದೆ. ನಾಟಿ ಕೊತ್ತಂಬರಿ ಬೇಡಿಕೆಗೆ ತಕ್ಕಷ್ಟು ಆವಕ ಮಾರುಕಟ್ಟೆಗೆ ಬರುತ್ತಿಲ್ಲ ಎನ್ನಲಾಗುತ್ತಿದೆ. 

ಕಳೆದ ಒಂದು ತಿಂಗಳಿಂದ ಬಿಸಿಲಿನ ತಾಪಮಾನ ದಿನೇದಿನೇ ಏರಿಕೆ ಆಗುತ್ತಿದ್ದ ಕಾರಣಕ್ಕೆ ಬೀನ್ಸ್‌, ಗೆಡ್ಡೆಕೋಸಿನ ಬೆಲೆ ಗಗನಕ್ಕೇರಿತ್ತು. 15 ದಿನಗಳಿಂದ ಮುಂಗಾರು ಮಳೆ ಬೀಳುತ್ತಿರುವುದರಿಂದ ಜಮೀನಿನಲ್ಲಿ ಬಹುತೇಕ ತರಕಾರಿಗಳು ಹೆಚ್ಚಿದ್ದು, ಬೆಳೆ ಉತ್ತಮವಾಗಿಯೇ ಬಂದಿದೆ. ಇದರಿಂದ ಸ್ವಲ್ಪ ಬೆಲೆ ಇಳಿಕೆಯಾಗಿದೆ ಎನ್ನಬಹುದು. ಆದರೆ ಹಣ್ಣು ಹಾಗೂ ಹೂವಿನ ಬೆಲೆ ಸ್ವಲ್ಪ ಹೆಚ್ಚಳ ಎನಿಸಿದರೆ, ಇನ್ನೂ ಕೆಲವು ಸಾಧಾರಣ ಬೆಲೆಯಲ್ಲಿ ಮಾರಾಟವಾಗುತ್ತಿವೆ. 

ಶುಂಠಿ, ಬಟಾಣಿ, ಹಸಿರು ಮೆಣಸಿನಕಾಯಿ ಸೇರಿದಂತೆ ಕೆಲವು ತರಕಾರಿ ಬೆಲೆ ಸ್ವಲ್ಪ ಹೆಚ್ಚಳವಿದೆ. ಇನ್ನು ಕೆಲವು ತರಕಾರಿಗಳು ಸಾಧಾರಣ ಬೆಲೆಯಲ್ಲಿ ಗ್ರಾಹಕರಿಗೆ ಕೈಗೆಟಕುವ ದರದಲ್ಲಿಯೇ ಮಾರಾಟವಾಗುತ್ತಿವೆ. ಬೆಳ್ಳುಳ್ಳಿ, ಟೊಮೆಟೊ ಬೆಲೆಯು ಇಳಿಕೆ ಕಂಡಿದೆ. ಕೆಲವು ಹೂಗಳನ್ನು ಹೊರತು ಪಡಿಸಿದರೆ, ಕನಕಾಂಬರ, ಕಾಕಡ, ಮಲ್ಲಿಗೆ ಸೇರಿದಂತೆ ಬಹುತೇಕ ಹೂಗಳ ಬೆಲೆ ಸಾಧಾರಣವಾಗಿದೆ. ಹಣ್ಣುಗಳಲ್ಲಿಯೂ ಸೇಬು ಮತ್ತು ಕಿತ್ತಳೆ ಸೇರಿದಂತೆ ಹಲವು ಹಣ್ಣುಗಳ ಬೆಲೆಯೂ ಸ್ವಲ್ಪ ಹೆಚ್ಚಳವಾಗಿರುವುದರಿಂದ ಗ್ರಾಹಕರಿಗೆ ದುಬಾರಿಯಂತೆ ಕಾಣುತ್ತಿದೆ.

ಸೊಪ್ಪುಗಳಲ್ಲಿಯೂ ಮೆಂತ್ಯ ₹50ರಿಂದ ₹60ರಂತೆ ಒಂದು ಕಂತೆಗೆ ಮಾರಾಟವಾಗುವ ಮೂಲಕ ಬೆಲೆ ಹೆಚ್ಚಳವಾಗಿ ಕಂಡಿತು. ಎರಡು ತಿಂಗಳಿಂದಲೂ ನಾಟಿ ಬೆಳ್ಳುಳ್ಳಿ ಬೆಲೆ ಇಳಿಕೆ ಆಗದೇ ಬರೋಬ್ಬರಿ ₹400ರ ಗಡಿ ದಾಟಿತ್ತು. ಪ್ರಸ್ತುತದಲ್ಲಿ ₹300ರಿಂದ ₹320ರಂತೆ ಮಾರಾಟವಾಗುತ್ತಿದೆ. ಈರುಳ್ಳಿ ₹100ಕ್ಕೆ ಮೂರು ಕೆ.ಜಿ. ಮಾರಾಟವಾಗುತ್ತಿದೆ.

ಬಜ್ಜಿ ಮೆಣಸಿನಕಾಯಿ, ಮಂಗಳೂರು ಸೌತೆ, ಸಿಹಿಗುಂಬಳ, ಎಲೆಕೋಸು ₹20, ಈರುಳ್ಳಿ, ಸೌತೆಕಾಯಿ ಕೆ.ಜಿ.ಗೆ ₹30, ಸೀಮೆ ಬದನೆಕಾಯಿ, ಹೂಕೋಸು, ಈರೇಕಾಯಿ, ಮೂಲಂಗಿ, ಬೆಂಡೆಕಾಯಿ, ಸಿಹಿಗೆಣಸು, ಸೋರೆಕಾಯಿ, ಆಲೂಗೆಡ್ಡೆ ₹40, ರಾಜ್‌ ಈರುಳ್ಳಿ, ಕ್ಯಾರೆಟ್‌, ಟೊಮೆಟೊ ₹50, ಹಾಗಲಕಾಯಿ, ಗೋರಿಕಾಯಿ, ಸುವರ್ಣಗೆಡ್ಡೆ, ಪಡವಲಕಾಯಿ, ಫಾರಂ ಬೀನ್ಸ್‌ ₹60, ನಾಟಿ ಬೀನ್ಸ್‌, ₹80, ಗೆಡ್ಡೆಕೋಸು, ಹಸಿರುಮೆಣಸಿನಕಾಯಿ, ಸುಂಠಿ, ಹಸಿ ಬಟಾಣಿ ₹100, ಫಾರಂ ಬೆಳ್ಳುಳ್ಳಿ ₹150, ನಾಟಿ ಬೆಳ್ಳುಳ್ಳಿ ₹320 ರಂತೆ ಪ್ರತಿ ಕೆ.ಜಿ.ಗೆ ಹಾಗೂ ನಿಂಬೆಹಣ್ಣಿಗೆ ಒಂದಕ್ಕೆ ₹5 ರಿಂದ ₹8 ರಂತೆ ಮಾರಾಟವಾಗುತ್ತಿವೆ.

ಸೊಪ್ಪುಗಳಲ್ಲಿ ಕೀರೆ ₹5, ಸಬ್ಬಸಿಗೆ, ಕರಿಬೇವು, ಚಿಕ್ಕಿಸೊಪ್ಪು, ಪುದೀನಾ, ದಂಟು ₹10, ಮೆಂತ್ಯ ₹60, ನಾಟಿ ಕೊತ್ತಂಬರಿ ₹80ರಂತೆ ಪ್ರತಿ ಕಂತೆಗೆ ಮಾರಾಟವಾಗುತ್ತಿದೆ.

ಹೂವಿನ ಬೆಲೆಯಲ್ಲಿ ಕೆಲವು ದುಬಾರಿಯಾಗಿದ್ದವು. ಅವುಗಳಲ್ಲಿ ಹಳದಿ ಮತ್ತು ಕೆಂಪು ಚೆಂಡು ಹೂವು ₹50, ಸಣ್ಣಗುಲಾಬಿ ₹100, ಸುಗಂಧರಾಜ ₹120, ಕಲ್ಕತ್ತಾ ಮಲ್ಲಿಗೆ ₹120, ಬಟನ್ಸ್‌, ಬಿಳಿ ಸೇವಂತಿಗೆ, ಸೇವಂತಿಗೆ ₹300, ಮರಳೆ ₹350, ಕನಕಾಂಬರ, ಮಲ್ಲಿಗೆ ₹600 ರಂತೆ ಕೆ.ಜಿ.ಗೆ ಮಾರಾಟವಾದರೆ, ತುಳಸಿ ₹30, ಹಳದಿ ಮತ್ತು ಕೆಂಪು ಚೆಂಡು ಹೂವು ₹50, ಗಣಗಲೆ ₹60, ಕನಕಾಂಬರ ₹80 ಪ್ರತಿ ಮಾರಿಗೆ ಖರೀದಿಯಾಗುತ್ತಿವೆ.

ಹಣ್ಣುಗಳಲ್ಲಿ ಡ್ರ್ಯಾಗನ್‌ ಫ್ರೂಟ್‌ ಸೇರಿದಂತೆ ಸೇಬು, ದಾಳಿಂಬೆ, ಶರತ್‌ ದ್ರಾಕ್ಷಿ, ಕೆಲವು ಹಣ್ಣಿನ ಬೆಲೆಯಲ್ಲಿ ಏರಿಕೆ ಕಂಡಿದೆ. ಅನಾನಸ್‌, ಕಿತ್ತಳೆ, ಬಾಳೆಹಣ್ಣಿನ ಬೆಲೆ ಸಾಧಾರಣವಾಗಿದೆ. ಅವುಗಳಲ್ಲಿ ಪಪ್ಪಾಯಿ ₹26, ಕಲ್ಲಂಗಡಿ ₹30, ಪಚ್ಚಬಾಳೆ, ಕರ್ಬೂಜ, ₹48, ಏಲಕ್ಕಿಬಾಳೆ ₹67, ಮೂಸಂಬೆ ₹96, ಕಿವಿಹಣ್ಣು (ಬಾಕ್ಸ್‌) ₹109, ಕಿತ್ತಳೆ ₹140, ಡ್ರ್ಯಾಗನ್‌ ಫ್ರೂಟ್ ₹190, ಶರತ್‌ದ್ರಾಕ್ಷಿ ₹225, ದಾಳಿಂಬೆ ₹248, ಆಸ್ಟ್ರೇಲಿಯಾ ಸೇಬು ₹255, ರಾಯಲ್‌ ಗಾಲ ಸೇಬು ₹296ರಂತೆ ಪ್ರತಿ ಕೆ.ಜಿ.ಗೆ ಮಾರಾಟವಾಗುತ್ತಿವೆ. 

ತರಕಾರಿ ಹಣ್ಣು ದರ ಪಟ್ಟಿ (₹ಪ್ರತಿ ಕೆ.ಜಿ) ನಾಟಿ ಬೀನ್ಸ್‌ ₹100 ನುಗ್ಗೇಕಾಯಿ ₹60 ಹಸಿರು ಮೆಣಸಿನಕಾಯಿ ₹100 ಕ್ಯಾರೆಟ್‌ ₹50 ಗೆಡ್ಡೆಕೋಸು ₹100 ಟೊಮೆಟೊ ₹50 ರಾಜ್‌ ಈರುಳ್ಳಿ ₹80 ನಾಟಿ ಬೆಳ್ಳುಳ್ಳಿ ₹320 ರಾಯಲ್‌ ಗಾಲ ಸೇಬು ₹296 ಆಸ್ಟ್ರೇಲಿಯಾ ಸೇಬು ₹255 ಶರತ್‌ ದ್ರಾಕ್ಷಿ ₹225 ಕಿತ್ತಳೆ ₹140 ಪಚ್ಚಬಾಳೆ ₹48 ಏಲಕ್ಕಿಬಾಳೆ ₹67 ದಾಳಿಂಬೆ ₹248

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT