ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಬದ್ದ: ಶಾಸಕ ದರ್ಶನ್ ಪುಟ್ಟಣ್ಣಯ್ಯ

Published 7 ಅಕ್ಟೋಬರ್ 2023, 13:42 IST
Last Updated 7 ಅಕ್ಟೋಬರ್ 2023, 13:42 IST
ಅಕ್ಷರ ಗಾತ್ರ

ಪಾಂಡವಪುರ: ಉತ್ತಮ ಸಾಧನೆ ಮಾಡುತ್ತಿರುವ ಹಳ್ಳಿಗಾಡಿನ ಮಕ್ಕಳಿಗೆ ಕಷ್ಟಸುಖಗಳ ಅರಿವಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ತಾಲ್ಲೂಕಿನ ಬೇಬಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲೂಬರ್ ಲೂಬ್ರಿಕೇಷನ್ ಮತ್ತು ಕಲಿಸು ಫೌಂಡೇಷನ್ ವತಿಯಿಂದ  ನವೀಕರಣಗೊಂಡ ಶಾಲಾ ಗ್ರಂಥಾಲಯ ಉದ್ಫಾಟನೆ ಮಾಡಿ ಅವರು ಮಾತನಾಡಿದರು.

ಶಾಸಕನಾಗಿ ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸುತ್ತಿದ್ದೇನೆ.  ಖಾಸಗಿ ಸಂಸ್ಥೆಗಳು ಕೈಜೋಡಿಸುತ್ತಿರುವುದು ಸಮಾದಾನ ತಂದಿದೆ ಎಂದು ಹೇಳಿದರು.

ಕ್ಲೂಬರ್ ಲೂಬ್ರಿಕೇಷನ್ ಸಂಸ್ಥೆಯ ಮ್ಯಾನೇಜರ್ ಶ್ರೀಪಾದರಾವ್ ಆಚಾರ್ ಮಾತನಾಡಿ, ಪ್ರತಿಯೊಂದು ಸಂಸ್ಥೆಗಳು ಸಮಾಜಮುಖಿಯಾಗಿ ಸೇವೆ ಸಲ್ಲಿಸಲು ಹೆಚ್ಚಿನ ಆಸಕ್ತಿ ಇದೆ ಎಂದರು.

ಸಂಸ್ಥೆಯ ಮ್ಯಾನೇಜರ್‌ಗಳಾದ ಮಹೇಶ್ ಮೂರ್ತಿ, ಸಂದೀಪ್‌, ದಿವಾಕರ್, ದೀಪಕ್, ವಿರೇಂದ್ರ, ಜೀತನ್, ಡಿ.ಕೆ.ಸುರೇಶ್, ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಮುಖಂಡರಾದ ಎಣ್ಣೆಹೊಳೆಕೊಪ್ಪಲು ಮಂಜು, ರಘು ಬೇಬಿ , ಸಿದ್ದರಾಜು, ಷಡಕ್ಷರಿ, ಕುಮಾರ್, ಆನಂದ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT