ಲೋಕಸಭಾ ಚುನಾವಣೆ: ಮೈಸೂರು–ಕೊಡಗು ಕ್ಷೇತ್ರದಿಂದ ಸ್ಪರ್ಧಿಸಲು ನಟ ನಿಖಿಲ್‌ ಇಂಗಿತ

ಭಾನುವಾರ, ಮಾರ್ಚ್ 24, 2019
28 °C

ಲೋಕಸಭಾ ಚುನಾವಣೆ: ಮೈಸೂರು–ಕೊಡಗು ಕ್ಷೇತ್ರದಿಂದ ಸ್ಪರ್ಧಿಸಲು ನಟ ನಿಖಿಲ್‌ ಇಂಗಿತ

Published:
Updated:

ಮೈಸೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು–ಕೊಡಗು ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತವನ್ನು ನಟ ನಿಖಿಲ್‌ ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್‌ ಜಿಲ್ಲಾ ಘಟಕದ ವತಿಯಿಂದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಾ, ‘ನನಗೂ ಒಂದು ಅವಕಾಶ ಕೊಡಿ’ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

‘ಮೈಸೂರಿಗೆ ಯಾರು ಅಭ್ಯರ್ಥಿ ಎಂಬುದನ್ನು ವರಿಷ್ಠರು ತೀರ್ಮಾನಿಸಲಿದ್ದಾರೆ. ಪಕ್ಷ ಯಾರನ್ನೇ ನಿಲ್ಲಿಸಿದರೂ ಅವರನ್ನು ಗೆಲ್ಲಿಸಿ ಎಚ್‌.ಡಿ.ದೇವೇಗೌಡರಿಗೆ ಶಕ್ತಿ ತುಂಬಬೇಕು’ ಎಂದು ಕರೆ ನೀಡಿದರು.

ಇದನ್ನೂ ಓದಿ... ಎಚ್‌ಡಿಕೆ ವಿರುದ್ಧ ತಿರುಗಿಬಿದ್ದ ಸುಮಲತಾ

‘ನನಗೆ ರಾಜಕೀಯದಲ್ಲಿ ಅನುಭವ ಕಡಿಮೆ. ಆದರೆ, ರಾಜಕೀಯವನ್ನೇ ಉಸಿರಾಡುವ ಕುಟುಂಬದಲ್ಲಿ ಜನಿಸಿದ್ದು ನನ್ನ ಪುಣ್ಯ. ನನ್ನ ತಂದೆಯನ್ನು ನಿಮ್ಮ ಮನೆಯ ಮಗನಾಗಿ ಸ್ವೀಕರಿಸಿದ್ದೀರಿ. ನಾನು ಕೂಡಾ ನಿಮ್ಮ ಮನೆಯ ಮಗ. ನಿಮ್ಮ ಸೇವೆ ಮಾಡಲು ಒಂದು ಅವಕಾಶ ನೀಡಿ’ ಎಂದರು.

‘ನನ್ನ ತಂದೆ ಮುಖ್ಯಮಂತ್ರಿ ಆಗುವುದಕ್ಕೆ ಮೈಸೂರು ಜಿಲ್ಲೆಯ ಜನರ ಬೆಂಬಲ ಕೂಡ ಕಾರಣ. ರಾಮನಗರ, ಹಾಸನ, ಮಂಡ್ಯ ಅಥವಾ ಮೈಸೂರು ಜಿಲ್ಲೆ ನಮಗೆ ಬೇರೆಬೇರೆಯಲ್ಲ. ಎಲ್ಲವೂ ಒಂದೇ ಎಂಬುದು ನನ್ನ ಭಾವನೆ’ ಎಂದು ಹೇಳಿದರು.

ಇದನ್ನೂ ಓದಿ...  ಸುಮಲತಾಗೆ ಕಾಂಗ್ರೆಸ್‌ ಬೆಂಬಲ ಇಲ್ಲ: ದಿನೇಶ್‌ ಗುಂಡೂರಾವ್‌ ಸ್ಪಷ್ಟನೆ

ಬರಹ ಇಷ್ಟವಾಯಿತೆ?

 • 13

  Happy
 • 6

  Amused
 • 3

  Sad
 • 2

  Frustrated
 • 21

  Angry

Comments:

0 comments

Write the first review for this !