ಪಾಂಡವಪುರ: ಕೊರೊನಾ ಸೋಂಕಿತರನ್ನು ಸಕಾಲಕ್ಕೆ ಕೋವಿಡ್ ಕೇರ್ ಸೆಂಟರ್ಗೆ ಕರೆದೊಯ್ಯಲು ಆಂಬುಲೆನ್ಸ್ ಬಾರದ ಕಾರಣ ಸೋಂಕಿತರು ಪಟ್ಟಣದ ಆಸ್ಪತ್ರೆ ಆವರಣದಲ್ಲಿ ಮಲಗಿದ್ದರು.

‘ಸೋಂಕಿತರನ್ನು ಕೋವಿಡ್ ಸೆಂಟರ್ಗೆ ದಾಖಲಿಸಲು ವಿಳಂಬ ಮಾಡುವುದು ಸರಿಯಲ್ಲ. ತಾಲ್ಲೂಕು ಆಡಳಿತವು ಸಕಾಲದಲ್ಲಿ ಸಮರ್ಪಕ ಚಿಕಿತ್ಸೆ ನೀಡಲು ಕ್ರಮ ವಹಿಸಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದರು.

ನಾಲ್ವರು ಆಂಬುಲೆನ್ಸ್ಗಾಗಿ ಸಾಕಷ್ಟು ಹೊತ್ತು ಕಾದು ಮಲಗಿದ್ದರು.

ಒಂದೇ ಆಂಬುಲೆನ್ಸ್: ‘ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಎರಡು ಆಂಬುಲೆನ್ಸ್ಗಳಿವೆ. ಈ ಪೈಕಿ ಒಂದನ್ನು ಇತರ ರೋಗಿಗಳನ್ನು ಕರೆದೊಯ್ಯಲು ಮೀಸಲಿರಿಸಲಾಗಿದೆ. ಒಂದು ಆಂಬುಲೆನ್ಸ್ ಅನ್ನು ಮಾತ್ರ ಸೋಂಕಿತರನ್ನು ಕರೆದೊಯ್ಯಲು ಬಳಕೆ ಮಾಡಲಾಗುತ್ತಿದೆ’ ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಎಚ್.ಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.