ಸೌರ ಗ್ರಾಮಕ್ಕೆ ₹1 ಕೋಟಿ ಅನುದಾನ
ಆಯ್ಕೆಯಾಗುವ ಮಾದರಿ ಸೌರ ಗ್ರಾಮಕ್ಕೆ ₹1 ಕೋಟಿ ಕೇಂದ್ರಿಯ ಹಣಕಾಸಿನ ಸಹಾಯ (ಸಿ.ಎಫ್.ಎ) ಅನುದಾನ ನೀಡಲಾಗುವುದು. ಈ ಚಟುವಟಿಕೆಗಳನ್ನು ಆಯಾಯ ಪಂಚಾಯಿತಿ ಕಾರ್ಯದರ್ಶಿಗಳ ನೇತೃತ್ವದಲ್ಲಿ ಗ್ರಾಮ ಮಟ್ಟದ ಕಾರ್ಯಪಡೆ ಸಮಿತಿ ರಚಿಸಲಾಗುವುದು ಎಂದು ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ತಿಳಿಸಿದ್ದಾರೆ. ನಿರೀಕ್ಷಿತ ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಪ್ರಚಾರ ಮಾಡುವುದು ಜನಸಾಮಾನ್ಯರಲ್ಲಿ ಸೌರ ವಿದ್ಯುತ್ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವುದು ವಿವಿಧ ಯೋಜನೆಗಳ ಸವಲತ್ತುಗಳನ್ನು ಪಡೆದುಕೊಳ್ಳಲು ಉತ್ತೇಜಿಸುವುದು. ಪಂಚಾಯಿತಿಯ ನಿರೀಕ್ಷಿತ ಫಲಾನುಭವಿಗಳು ಬ್ಯಾಂಕ್‌ಗಳು ಅನುಮೋದನೆ ಹೊಂದಿರುವ ಮಾರಾಟಗಾರರ ನಡುವೆ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.