ಮಂಡ್ಯ: ಸೆಲ್ಕೊ ಫೌಂಡೇಷನ್ ಮತ್ತು ಪುಟ್ಟಣ್ಣಯ್ಯ ಫೌಂಡೇಷನ್ ಹಾಗೂ ಸರ್ಕಾರಿ ಇಲಾಖೆಗಳ ಸಹಯೋಗದೊಂದಿಗೆ ‘ಸೌರಶಕ್ತಿ-ಸ್ವ ಉದ್ಯೋಗ ಮೇಳ’ವನ್ನು ಜುಲೈ 19ರ ಬೆಳಿಗ್ಗೆ 10.30ಕ್ಕೆ ಪಾಂಡವಪುರ ತಾಲ್ಲೂಕಿನ ಟಿ.ಎ.ಪಿ.ಸಿ.ಎಂ.ಎಸ್.ನ ರೈತ ಭವನದಲ್ಲಿ ಆಯೋಜಿಸಲಾಗಿದೆ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರದ ಜಿಡಿಪಿಗೆ ಕೃಷಿ ಕೇಂದ್ರ ಶೇ 45ರಷ್ಟು ಕೊಡುಗೆ ನೀಡುತ್ತಿದ್ದು, ಕೃಷಿಯಲ್ಲಿ ಶೇ 60ರಷ್ಟು ಮಹಿಳೆಯರೇ ತೊಡಗಿದ್ದು, ಕೃಷಿ ಜೊತೆಗೆ ಬಿಡುವಿನ ವೇಳೆಯಲ್ಲಿ ಸ್ವ– ಉದ್ಯೋಗ ರೂಪಿಸಿಕೊಳ್ಳಲು ಸದರಿ ಕಾರ್ಯಕ್ರಮ ಪ್ರೋತ್ಸಾಹಿಸುತ್ತದೆ ಎಂದರು.

ಸ್ವ– ಸಹಾಯ ಸಂಘಗಳು ಹಾಗೂ ಗುಂಪುಗಳನ್ನು ಒಂದೆಡೆ ಸೇರಿಸಿ ಸ್ತ್ರೀ ಸಬಲೀಕರಣದ ಮೂಲಕ ಹೊಸ ಸಾಧ್ಯತೆಗಳನ್ನು ಒದಗಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಕಾರ್ಯಕ್ರಮಕ್ಕೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ, ಎಂಆರ್ಎಲ್ಎಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗವಿದೆ. ಸಂವಾದ, ಯಂತ್ರಗಳ ಪ್ರಾತ್ಯಕ್ಷಿಕೆ, ಮಾದರಿ ಪ್ರಯೋಗಗಳ ಪ್ರದರ್ಶನ ನೀಡಲು 16 ಮಳಿಗೆಗಳನ್ನು ತೆರೆಯಲಾಗುತ್ತದೆ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್. ನಂದಿನಿ, ಸೆಲ್ಕೋ ಫೌಂಡೇಷನ್ನ ನಿರ್ದೇಶಕಿ ಹುದಾ ಜಾಫರ್, ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್. ಕೆಂಪೂಗೌಡ, ಕೃಷಿ ಜಂಟಿ ನಿರ್ದೇಶಕ ವಿ.ಎಸ್. ಅಶೋಕ್, ತೋಟಗಾರಿಕೆ ಇಖಾಖೆಯ ಉಪನಿರ್ದೇಶಕಿ ಕೆ.ಎನ್. ರೂಪಶ್ರೀ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ರಾಜಮೂರ್ತಿ ಎಸ್, ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸೆಲ್ಕೋ ಫೌಂಡೇಶನ್ನ ಪ್ರಕಾಶ್ ಮೇತಿ ಮಾತನಾಡಿ, ಈಗಾಗಲೇ ಉತ್ತರ ಕರ್ನಾಟಕದ 16 ಜಿಲ್ಲೆಗಳಲ್ಲಿ ಸದರಿ ಕಾರ್ಯಕ್ರಮದ ಮೂಲಕ ಕೃಷಿಯಲ್ಲಿ ತೊಡಗಿಕೊಂಡ ಮಹಿಳೆಯರಿಗೆ ಸ್ವ ಉದ್ಯೋಗ ರೂಪಿಸಿಕೊಡಲಾಗಿದ್ದು, ಸದರಿ ಸ್ವ ಉದ್ಯೋಗ ಆಯ್ಕೆ ಮಾಡಿಕೊಳ್ಳುವ ಮಹಿಳೆಯರಿಗೆ ಯಂತ್ರಗಳ ಅಳವಡಿಕೆ, ಬಳಕೆಗೆ ಸಂಸ್ಥೆಯ ವತಿಯಿಂದ ನೆರವು ನೀಡಲಾಗುವುದು. ಹಣಕಾಸಿನ ವಿಷಯವಾಗಿ ಕೇಂದ್ರ ಸರ್ಕಾರದಿಂದ ಶೇ 35ರಷ್ಟು, ರಾಜ್ಯ ಸರ್ಕಾರದಿಂದ ಶೇ 15ರಷ್ಟು ಸೇರಿ ಒಟ್ಟು ಶೇ 50ರಷ್ಟು ಸೌರ ವಿದ್ಯುತ್ ಸೌಲಭ್ಯಕ್ಕೆ ಸಬ್ಸಿಡಿ ದೊರೆಯಲಿದೆ. ಕಾರ್ಯಕ್ರಮದಲ್ಲಿ 800ಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳ ಸದಸ್ಯರು ಪಾಲ್ಗೊಳ್ಳುವ ನಿರೀಕ್ಷಯಿದೆ ಎಂದು ಮಾಹಿತಿ ನೀಡಿದರು.

ಸೌರಶಕ್ತಿ ಅಳವಡಿಕೆ ಹಾಗೂ ಯಂತ್ರಗಳ ಕುರಿತು ಮಾಹಿತಿಗಾಗಿ ಮೊ: 8105769666 ಜಾಲತಾಣಕ್ಕೆ ಭೇಟಿ ನೀಡುವಂತೆ ಮನವಿ ಮಾಡಿದರು.

ಗೋಷ್ಠಿಯಲ್ಲಿ ಪುಟ್ಟಣ್ಣಯ್ಯ ಫೌಂಡೇಶನ್ನ ರಂಜಿತ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.