ಕೆ.ಆರ್.ಪೇಟೆ: ಪಟ್ಟಣದ ಹೊರವಲಯದ ಮಾತೃಭೂಮಿ ವೃದ್ಧಾಶ್ರಮದಲ್ಲಿ ಅಂತರರಾಷ್ಟ್ರೀಯ ವಿಶೇಷ ಚೇತನರ ದಿನಾಚರಣೆ ನಡೆಸಲಾಯಿತು.

ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಶೇಷಚೇತನ ಕೆ.ಎಸ್.ರಾಜಣ್ಣ ವಿಶ್ವಕರ್ಮ ಮಾತನಾಡಿ, ವಿಶೇಷ ಚೇತನರು ದೇವರ ಮಕ್ಕಳು. ಅವರಲ್ಲಿ ಸಾಧನೆ ಮಾಡಿ ಮುನ್ನಡೆಯುವ ಆತ್ಮವಿಶ್ವಾಸ ಹಾಗೂ ಛಲವಿದೆ. ನಾಗರಿಕ ಸಮಾಜವು ಅವರ ಬಗ್ಗೆ ಅನುಕಂಪ ವ್ಯಕ್ತಪಡಿಸುವ ಬದಲು ಅವಕಾಶ ಕಲ್ಪಿಸಿಕೊಡಬೇಕು ಎಂದರು.

ಅವಕಾಶದಿಂದ ವಿಶೇಷ ಚೇತನರು ತಮ್ಮಲ್ಲಿರುವ ಸಾಮರ್ಥ್ಯ ಅನಾವರಣ ಮಾಡುವರು. ಬಾಲ್ಯದಲ್ಲಿಯೇ ಪೋಲಿಯೋ ರೋಗಕ್ಕೆ ತುತ್ತಾಗಿ ಶಾಶ್ವತವಾಗಿ ಕೈಕಾಲು ಕಳೆದುಕೊಂಡಿದ್ದರೂ, ಜೀವನದಲ್ಲಿ ಏನನ್ನಾದರೂ ಸಾಧಿಸಲೇಬೇಕು ಎಂಬ ಛಲ ಮಾತ್ರ ಬಿಡಲಿಲ್ಲ. ಆದ್ದರಿಂದ ನನ್ನ 66ನೇ ವಯಸ್ಸಿನಲ್ಲಿಯೂ ಉತ್ಸಾಹದಿಂದ ರಾಜ್ಯದಾದ್ಯಂತ ಓಡಾಡುತ್ತಿದ್ದೇನೆ. ಬೆಂಗಳೂರು ನಗರದಲ್ಲಿ ಸ್ವಂತ ಕಂಪನಿ ಸ್ಥಾಪಿಸಿ ಹಲವರಿಗೆ ಉದ್ಯೋಗ ನೀಡಿದ್ದೇನೆ. ವೃದ್ಧಾಶ್ರಮ ಸ್ವಂತ ಕಟ್ಟಡ ಹೊಂದಲೆಂದು ವೈಯಕ್ತಿಕವಾಗಿ ₹21 ಸಾವಿರ ಹಣ ನೀಡುತ್ತಿದ್ದೇನೆ ಎಂದು ತಿಳಿಸಿದರು.

ಪ್ರಮುಖರಾದ ಕೆ.ಆರ್.ನೀಲಕಂಠ, ಲತಾ ವಿಕ್ರಂ, ಸುಧಾ, ಖಲೀಲ್, ಭಾಗ್ಯಲಕ್ಷ್ಮಿ ಭಾಗವಹಿಸಿದ್ದರು.