ನೀರಿಲ್ಲದೆ ಬಣಗುಡುತ್ತಿದ್ದ ಜಲಪಾತಗಳು ಇದೀಗ ದುಮ್ಮಿಕ್ಕಿ ಹರಿಯುತ್ತಿವೆ. ಕಾವೇರಿ ಮತ್ತು ಕಪಿಲಾ ನದಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಹರಿವಿರುವುದರಿಂದ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳಲ್ಲಿ ನೀರು ಬೋರ್ಗರೆಯುವ ದೃಶ್ಯ ವೈಭವವನ್ನು ಸವಿಯಲು ನೆರೆಯ ತಮಿಳುನಾಡು, ಕೇರಳ, ರಾಜ್ಯದ ವಿವಿಧ ಮೂಲೆಗಳಿಂದ ಪ್ರವಾಸಿಗರ ದಂಡೇ ಜಲಪಾತ ವೀಕ್ಷಣೆಗೆ ಹರಿದು ಬರುತ್ತಿದೆ.