ಬುಧವಾರ, ಜನವರಿ 27, 2021
24 °C

ಬಾರ್‌, ವೈನ್‌ಶಾಪ್‌ನಲ್ಲಿ ಕಳ್ಳತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಜಿಲ್ಲೆಯ ಎರಡು ಕಡೆ ಬಾರ್‌ ಹಾಗೂ ವೈನ್‌ಶಾಪ್‌ಗೆ ಕನ್ನಹಾಕಿರುವ ಕಿಡಿಗೇಡಿಗಳು, ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯ ಹೊತ್ತೊಯ್ದಿದ್ದಾರೆ.

ತಾಲ್ಲೂಕಿನ ಚಿಕ್ಕಮಂಡ್ಯದ ಕೃತಿಕಾ ಬಾರ್‌ನ ಕಿಟಕಿ ಸರಳು ಮುರಿದು ಒಳನುಗ್ಗಿ, ₹5 ಲಕ್ಷ ಮೌಲ್ಯದ ಮದ್ಯ ಕಳ್ಳತನ ಮಾಡಿದ್ದಾರೆ. ಟಾರ್ಚ್‌ ಬೆಳಕಿನಲ್ಲಿ ಕಳ್ಳತನ ಮಾಡುತ್ತಿರುವ ದೃಶ್ಯ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮಳವಳ್ಳಿ ತಾಲ್ಲೂಕು ಹಾಡ್ಲಿ ವೃತ್ತದಲ್ಲಿರುವ ವಿನಾಯಕ ವೈನ್‌ಶಾಪ್‌ನಲ್ಲಿ ಗೋಡೆ ಕೊರೆದು ಗುರುವಾರ ರಾತ್ರಿ ಮದ್ಯ ಕದ್ದಿದ್ದಾರೆ.

ಮಂಡ್ಯ: ಜಿಲ್ಲೆಯ ಎರಡು ಕಡೆ ಬಾರ್‌ ಹಾಗೂ ವೈನ್‌ಶಾಪ್‌ಗೆ ಕನ್ನಹಾಕಿರುವ ಕಿಡಿಗೇಡಿಗಳು, ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯ ಹೊತ್ತೊಯ್ದಿದ್ದಾರೆ.ನಿಷೇಧಾಜ್ಞೆ ನಡುವೆಯೂ ಜಿಲ್ಲೆಯ ವಿವಿಧೆಡೆ ಕದ್ದುಮುಚ್ಚಿ ಮದ್ಯ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ.
ಮದ್ಯ ಸಂಗ್ರಹದಲ್ಲಿ ವ್ಯತ್ಯಾಸ ಕಂಡು ಬಂದರೆ ಅಂಗಡಿಗಳ ಲೈಸೆನ್ಸ್‌ ರದ್ದುಗೊಳಿಸಲಾಗುವುದು ಎಂದು ಅಬಕಾರಿ ಇಲಾಖೆ ಮೈಸೂರು ವಲಯದ ಜಂಟಿ ಆಯುಕ್ತ ಮಾದೇಶ್‌ ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು