ಶನಿವಾರ, ಆಗಸ್ಟ್ 13, 2022
27 °C

ಕಳ್ಳನ ಪೊಲೀಸರಿಗೊಪ್ಪಿಸಿದ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ನಗರದ ಯೂನಿಯನ್‌ ಬ್ಯಾಂಕ್‌ನಿಂದ (ಕಾರ್ಪೊರೇಷನ್‌ ಬ್ಯಾಂಕ್‌) ಹೊರ ಬಂದ ಮಹಿಳೆಯಿಂದ ಹಣ ಕಸಿದು ಪರಾರಿಯಾಗುತ್ತಿದ್ದ ಕಳ್ಳನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಗರದ ಕೆ.ಆರ್‌.ರಸ್ತೆಯಲ್ಲಿ ಬುಧವಾರ ನಡೆದಿದೆ.

ಶಂಕರ ಮಠ ಬಡಾವಣೆ ನಿವಾಸಿ ಕಮಲಮ್ಮ ಅವರು ಬೆಳಿಗ್ಗೆ ₹31 ಸಾವಿರ ನಗದೀಕರಿಸಿ ಬ್ಯಾಗಿನಲ್ಲಿ ಇಟ್ಟುಕೊಂಡು ಹೊರ ಬಂದ ಸಂದರ್ಭದಲ್ಲಿ ಮಹಾರಾಷ್ಟ್ರದ ನಾಗಪುರ ಮೂಲದ ಅನಿಲ್‌ರಾಜ್‌ ಎಂಬುವನು ಬ್ಯಾಗ್‌ ಕಸಿದು, ಆಟೊದಲ್ಲಿ ಪರಾರಿಯಾಗಲು ಯತ್ನಿದ್ದಾನೆ.

ಈ ಸಂದರ್ಭದಲ್ಲಿ ಕಮಲಮ್ಮ ಕೂಗಿಕೊಂಡಾಗ ಸಾರ್ವಜನಿಕರು ಅನಿಲ್‌ರಾಜ್‌ನನ್ನು ಹಿಡಿದು ಥಳಿಸಿ, ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಚಿಕಿತ್ಸೆಗಾಗಿ ಮಿಮ್ಸ್‌ಗೆ ದಾಖಲಿಸಲಾಗಿದ್ದು, ಮಂಡ್ಯ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು