ಮಂಗಳವಾರ, ಜೂನ್ 2, 2020
27 °C

ಅಜ್ಜಿ ಮನೆಗೆ ಬಂದಿದ್ದ ಇಬ್ಬರು ಯುವಕರು ಕೆರೆಯಲ್ಲಿ ಮುಳುಗಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಮಂಡ್ಯ: ಕೊರೊನಾ ಸೋಂಕಿನ ಭೀತಿಯಿಂದ ಬೆಂಗಳೂರಿನಿಂದ ಅಜ್ಜಿಯ ಮನೆಗೆ ಬಂದಿದ್ದ ಇಬ್ಬರು ಯುವಕರು ನಾಗಮಂಗಲ ತಾಲ್ಲೂಕು ದುಮ್ಮಸಂದ್ರ ಗ್ರಾಮದ ಕೆರೆಯಲ್ಲಿ ಮುಳುಗಿ ಭಾನುವಾರ ಮೃತಪಟ್ಟಿದ್ದಾರೆ.

ಬೆಂಗಳೂರಿನ ವಡೇರಹಳ್ಳಿಯಲ್ಲಿ ವಾಸವಿದ್ದ ಭಾಸ್ಕರ್ (21), ಅಭಿಷೇಕ್ (18) ಮೃತ ಯುವಕರು.

ಮೂವರು ಯುವಕರು ತೆಪ್ಪದ ಮೂಲಕ ಈಜಲು ಕೆರೆಗೆ ತೆರಳಿದ್ದರು. ಈಜುವಾಗ ತೆಪ್ಪ ತೂತಾಗಿದೆ. ಶಿವರಾಜು ಈಜಿ ಪಾರಾಗಿದ್ದು ಭಾಸ್ಕರ್, ಅಭಿಷೇಕ್ ಮುಳುಗಿ ಮೃತಪಟ್ಟಿದ್ದಾರೆ.

ಯುವಕರ ಶವಕ್ಕಾಗಿ‌ ಹುಡುಕಾಟ ನಡೆಯುತ್ತಿದೆ. ಬೆಳ್ಳೂರು ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು