ನಾಗಮಂಗಲ: ‘ವಡೇರಪುರ ಸರ್ಕಾರಿ ಶಾಲೆಯ ಶಿಕ್ಷಕರ ಕಾಳಜಿಯಿಂದ ಸರ್ಕಾರದ ಯಾವುದೇ ಅನುದಾನ ಪಡೆಯದೆ, ಸಮುದಾಯದ ಸಹಕಾರದಿಂದ ಖಾಸಗಿ ಶಾಲೆ ಮೀರಿಸುವಂತೆ ಕಟ್ಟಡ ನಿರ್ಮಿಸಿ ರಾಜ್ಯಕ್ಕೆ ಮಾದರಿಯಾಗಿದೆ. ಶಾಲೆಗೆ ಅಗತ್ಯವಾದ ಕಟ್ಟಡ, ಕಾಂಪೌಡ್ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ಕ್ರಮವಹಿಸುತ್ತೇನೆ’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ತಾಲ್ಲೂಕಿನ ವಡೇರಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿದ್ದ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

15 ವಿದ್ಯಾರ್ಥಿಗಳಿದ್ದ ಶಾಲೆಯಲ್ಲಿ ಪ್ರಸ್ತುತ 90 ಮಕ್ಕಳು ಅಧ್ಯಯನ ಮಾಡುತ್ತಿರುವುದನ್ನು ಗಮನಿಸಿದರೆ ಆಶ್ಚರ್ಯವಾಗುತ್ತದೆ. ಈ ಶಾಲೆಯ ಮುಖ್ಯ ಶಿಕ್ಷಕ ಮುರಳೀಧರ ಮತ್ತು ಶಿಕ್ಷಕರ ಶಿಕ್ಷಣ ಮೇಲಿರುವ ಕಾಳಜಿ ಮತ್ತು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಹಂಬಲವು ನಿಜವಾಗಿಯೂ ಪ್ರಶಂಸನೀಯವಾಗಿದೆ ಎಂದರು.

ಅಲ್ಲದೆ, ಶಾಲೆಗೆ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಸುಮಾರು 12 ಗ್ರಾಮಗಳ ಮಕ್ಕಳು ದಾಖಲಾಗಿ ಕಲಿಯುತ್ತಿದ್ದಾರೆ. ವಡೇರಪುರ ಶಾಲೆಯ ಶಿಕ್ಷಕರ ಕಾಳಜಿ, ಆಸಕ್ತಿ, ಶ್ರದ್ಧೆ ಮತ್ತು ಪಾಠ ಪ್ರವಚನಗಳು ಶಾಲೆಯ ವ್ಯಾಪ್ತಿಯ ಪೋಷಕರಲ್ಲದೇ ದೂರದ ಊರಿನ ಪೋಷಕರನ್ನು ಸೆಳೆಯುತ್ತಿವೆ ಎಂದು ತಿಳಿಸಿದರು.

ಶಾಲೆಗೆ ಹೆಚ್ಚುವರಿಯಾಗಿ ಎರಡು ಕೊಠಡಿ ಮತ್ತು ಕಾಂಪೌಂಡ್ ನಿರ್ಮಾಣಕ್ಕೆ ಶಿಕ್ಷಕರು ಮನವಿ ಮಾಡಿದ್ದಾರೆ. ಶೀಘ್ರದಲ್ಲಿಯೇ ಶಾಲೆಗೆ ಅಗತ್ಯ ಅನುದಾನ ಬಿಡುಗಡೆ ಮಾಡಿಸಲು ಕ್ರಮವಹಿಸುತ್ತೇನೆ. ಈ ಶಾಲೆಯ ಶಿಕ್ಷಕರ ಕಾರ್ಯ ಎಲ್ಲಾ ಸರ್ಕಾರಿ ಶಾಲೆಗಳ ಶಿಕ್ಷಕರಿಗೂ ಮಾದರಿಯಾಗಬೇಕು ಮೆಚ್ಚುಗೆ ವ್ಯಕ್ತಪಡಿಸಿದರು.

ಕ್ಷೇತ್ರ ಸಮನ್ವಯಾಧಿಕಾರಿ ಕೆ.ರವೀಶ್, ಶಿಕ್ಷಣ ಸಂಯೋಜಕ ಎಂ.ಡಿ.ಶಿವಕುಮಾರ್, ಎಸ್.ಡಿ.ಎಂ.ಸಿ ಅಧ್ಯಕ್ಷ ಗಿರೀಶ್, ಶಾಲೆ ಮುಖ್ಯಶಿಕ್ಷಕ ಮುರಳೀಧರ, ಎನ್.ಕೆ.ಪ್ರಸಾದ್, ಎನ್.ಸಿ.ಶಿವಕುಮಾರ್, ಮಲ್ಲಿಕಾರ್ಜುನ ಅರಳಿಕಟ್ಟೆ, ಹೆಚ್.ಡಿ.ಗಿರೀಶ್, ಫಿರೋಜ್ ಪಾಷ, ಸಂಪನ್ಮೂಲ ವ್ಯಕ್ತಿ ಕೋಮಲಾ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಜಯರಾಮು, ದಾನಿಗಳಾದ ವಡ್ಡರಹಳ್ಳಿ ರಾಜಣ್ಣ, ಸುವರ್ಣ ಕಿರಣ್, ವಿಜಯ ಜಕಾತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.