ಮಂಡ್ಯ: ‘ನಗರದಲ್ಲಿ ವಿಶ್ವಕರ್ಮ ಭವನವಿಲ್ಲ. ಇಲ್ಲಿ ಸರ್ಕಾರಿ ಜಾಗಗಳಿಗೆ ಕೊರತೆ ಇದೆ. ಮುಡಾದಿಂದ ನಿವೇಶನ ಖರೀದಿ ಮಾಡಿದರೆ ಸರ್ಕಾರದ ಅನುದಾನದಿಂದ ಸಮುದಾಯ ಭವನ ನಿರ್ಮಾಣ ಮಾಡಬಹುದಾಗಿದೆ. ನಿವೇಶನ ಖರೀದಿಸಲು ₹5 ಲಕ್ಷ ನೀಡುತ್ತೇನೆ’ ಎಂದು ಶಾಸಕ ಪಿ.ರವಿಕುಮಾರ್ ಭರವಸೆ ನೀಡಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಅವರ ಜೊತೆ ಸದಾ ಇರುತ್ತದೆ ಎಂದರು.

ಸಮುದಾಯದವರು ಇರದಿದ್ದರೆ ವಾಸವಿರಲು ಮನೆಗಳು ಇರುತ್ತಿರಲಿಲ್ಲ. ಜಗತ್ತಿನ ಮೊದಲ ದೇವಾಲಯವನ್ನು ನಿರ್ಮಿಸಿದ್ದು ವಿಶ್ವಕರ್ಮ. ಇವರಿಲ್ಲದೆ ರೈತರಿಗೆ ಉಳುಮೆ ಮಾಡಲು ನೇಗಿಲು ಇರಲ್ಲ. ವಿಶ್ವಕರ್ಮ ರೈತ ಸ್ನೇಹಿ. ಮದುವೆಗೆ ತಾಳಿ ಒಡವೆ ಮಾಡುವಂತಹ ಪೂಣ್ಯದ ಕೆಲಸವನ್ನು ವಿಶ್ವಕರ್ಮ ಸಮುದಾಯದವರು ಮಾಡುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದಮೂರ್ತಿ ಮಾತನಾಡಿ, ವಿಶ್ವಕರ್ಮ ಭವನ ನಿರ್ಮಾಣಕ್ಕೆ ನಿವೇಶನ ಖರೀದಿಸಲು ಶಾಸಕರು ಸಹಾಕರ ನೀಡುವುದಾಗಿ ಭರವಸೆ ನೀಡಿದ್ದಾರೆ. ಸಮುದಾಯದವರು ಹಣ ಸಂಗ್ರಹಿಸಿ ದರೆ ಖರೀದಿಸಲು ಕ್ರಮ ವಹಿಸಬಹುದು ಎಂದು ತಿಳಿಸಿದರು.

ಸಮುದಾಯದ ಹತ್ತು ಸಾಧಕರನ್ನು ಗೌರವಿಸಲಾಯಿತು. ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ, ಯತಿರಾಜ ದಾಪರ್ ಗುರು ಪೀಠದ ಗೃಹಸ್ಥ ಪೀಠಾಧಿಪತಿ ಶ್ರೀನಿವಾಸ ನರಸಿಂಹಸ್ವಾಮಿ ಗುರೂಜಿ, ನಗರಸಭೆ ಅಧ್ಯಕ್ಷ ಪ್ರಕಾಶ್, ನಟ ಮದನ್ ಕುಮಾರ್, ಸಮುದಾಯದ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ್, ನಗರಸಭೆ ಸದಸ್ಯರಾದ ಶ್ರೀಧರ್, ಶಿವಪ್ರಕಾಶ್, ಡಿ.ದೇವರಾಜ್ ಅರಸ್ ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಸಂದೇಶ್, ಅಮ್ಜದ್ ಪಾಷಾ ಪಾಲ್ಗೊಂಡಿದ್ದರು.

‘ಜಕಣಾಚಾರಿ ಪ್ರತಿಮೆ ನಿರ್ಮಾಣಕ್ಕೆ ಚಿಂತನೆ’

ಮದ್ದೂರು ಶಾಸಕ ಕೆ.ಎಂ ಉದಯ್ ಮಾತನಾಡಿ ‘ಸಮಾಜಕ್ಕೆ ವಿಶ್ವಕರ್ಮ ಸಮುದಾಯದವರು ಅನೇಕ ಕೊಡುಗೆಯನ್ನು ನೀಡಿದ್ದಾರೆ. ಆಧುನೀಕರಣದಲ್ಲಿ ಅನೇಕ ತಾಂತ್ರಿಕ ಮಾರ್ಪಾಡುಗಳು ಉಂಟಾಗಿವೆ. ಆದರೆ ಈಗಲೂ ಕೌಶಲಯುತವಾದ ಕಸುಬಿನೊಂದಿಗೆ ಸಮಾಜಕ್ಕೆ ವಿಶ್ವಕರ್ಮ ಸಮುದಾಯದವರು ಸೇವೆಯನ್ನು ಸಲ್ಲಿಸುತ್ತಿದ್ದಾರೆ’ ಎಂದು ಹೇಳಿದರು. ಮದ್ದೂರಿನಲ್ಲಿ ವಿಶ್ವಕರ್ಮ ಸಮುದಾಯದವರಿಗೆ ನಿವೇಶನ ನೀಡುವ ಸಲುವಾಗಿ ಸರ್ವೆ ಕೆಲಸ ನಡೆಸಲಾಗುತ್ತಿದೆ. ಶೀಘ್ರದಲ್ಲೇ ನಿವೇಶನ ಕೊಡಿಸಲಾಗುವುದು. ಒಂದು ರಸ್ತೆ ವೃತ್ತದಲ್ಲಿ ಅಮರ ಶಿಲ್ಪಿ ಜಕಣಾಚಾರಿ ಅವರು ಪ್ರತಿಮೆ ನಿರ್ಮಾಣ ಮಾಡಲು ಚಿಂತನೆ ಮಾಡಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.