ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಗೊಳ್ಳದ ‘ಗೋಲ್ಡ್ ಕಾರ್ಡ್‌’!

Last Updated 25 ಸೆಪ್ಟೆಂಬರ್ 2022, 14:58 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ದಸರೆಯಲ್ಲಿ ಹಲವು ವೇದಿಕೆಗಳಲ್ಲಿ ನಡೆಯುವ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಪ್ರವೇಶ ನೀಡುವ ‘ಗೋಲ್ಡ್‌ ಕಾರ್ಡ್‌’ ಇನ್ನೂ ಸಿದ್ಧವಾಗಿಲ್ಲ.

ಈ ಬಾರಿ ‘ಗೋಲ್ಡ್‌ ಕಾರ್ಡ್‌’ ವ್ಯವಸ್ಥೆ ಇರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ ತಿಳಿಸಿದ್ದರು. ಆದರೆ, ದಸರಾ ಆರಂಭವಾಗುತ್ತಿದ್ದರೂ ಪ್ರವಾಸಿಗರಿಗೆ ಅಥವಾ ಸಂದರ್ಶಕರಿಗೆ ಆ ಪಾಸ್‌ಗಳ ಬಗ್ಗೆ ಮಾಹಿತಿ ಇಲ್ಲವಾಗಿದೆ. ಜಿಲ್ಲಾಡಳಿತದಿಂದ ಬಿಡುಗಡೆ ಮಾಡಿರುವ ಜಾಲತಾಣದಲ್ಲೂ ಲಭ್ಯವಾಗುತ್ತಿಲ್ಲ. ಇದರಿಂದಾಗಿ, ಪಾಸ್ ಖರೀದಿಸುವುದು ಹೇಗೆ? ಎಷ್ಟು ಹಣ ಕಟ್ಟಬೇಕಾಗುತ್ತದೆ? ಎಲ್ಲೆಲ್ಲಿಗೆ ಮತ್ತು ಒಂದು ಕಾರ್ಡ್‌ಗೆ ಎಷ್ಟು ಮಂದಿಗೆ ಪ್ರವೇಶವಿರಲಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಹೀಗಾಗಿ, ಗೊಂದಲ ಮುಂದುವರಿದಿದೆ.

ಅರಮನೆಯಲ್ಲಿ ಸಾಂಸ್ಕೃತಿಕ ವೈವಿಧ್ಯ ಸೇರಿದಂತೆ ಸೇರಿದಂತೆ ಬಹುತೇಕ ಪ್ರಮುಖ ಕಾರ್ಯಕ್ರಮಗಳು ಸೆ.26ರಂದೇ ಆರಂಭಗೊಳ್ಳಲಿವೆ. ಚಲನಚಿತ್ರ ನಟ–ನಟಿಯರು ಪಾಲ್ಗೊಳ್ಳುವ ‘ಯುವ ದಸರಾ’ ಸೆ.27ರಿಂದ ಚಾಲನೆ ಪಡೆಯಲಿದೆ. ಆವುಗಳಲ್ಲಿ ಕಿರಿಕಿರಿ ಇಲ್ಲದೇ ಭಾಗವಹಿಸಬಹುದಾದ ‘ಗೋಲ್ಡ್ ಪಾಸ್’ ಅನ್ನು ಖರೀದಿಸಲು ವ್ಯವಸ್ಥೆಯನ್ನು ಮಾಡಲಾಗಿಲ್ಲ. ಕೊನೆ ಕ್ಷಣದಲ್ಲಿ ಪಾಸ್ ಲಭ್ಯವಾದರೆ ಬಹಳಷ್ಟು ಖರೀದಿಸಿದವರು ಕೆಲವೇ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ!

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ‘ಗೋಲ್ಡ್‌ ಪಾಸ್‌ ಮುದ್ರಣಕ್ಕೆ ಇನ್ನೂ 3–4 ದಿನ ಬೇಕಾಗಬಹುದು. ಸದ್ಯದವರೆಗೆ, ₹ 5ಸಾವಿರ ದರ ನಿಗದಿಪಡಿಸುವ ಮತ್ತು ಸಾವಿರ ಪ್ರತಿಗಳನ್ನು ಮುದ್ರಿಸುವ ಯೋಜನೆ ಇದೆ’ ಎಂದಷ್ಟೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT