ಬುಧವಾರ, ಅಕ್ಟೋಬರ್ 21, 2020
25 °C

ಮೈಸೂರಿನಲ್ಲಿ ಕೋಳಿ ಬಲಿ ಕೊಟ್ಟು ವಾಮಾಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮೈಸೂರಿನ ಕಲಾಮಂದಿರದ ಎದುರು ಮೂರು ರಸ್ತೆಗಳು ಸೇರುವಂತಹ ಸ್ಥಳದಲ್ಲಿ ಅಮವಾಸ್ಯೆಗೂ ಮುನ್ನ ದಿನ ಕೋಳಿಯೊಂದನ್ನು ಬಲಿ ಕೊಟ್ಟು ವಾಮಾಚಾರ ನಡೆಸಲಾಗಿದೆ.

ಗುರುವಾರ ಬೆಳಿಗ್ಗೆ ಜನರು ಇದನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದರು. ಈ ಪ್ರದೇಶದಲ್ಲಿ ತಡರಾತ್ರಿ ಜನ ಸಂಚಾರ ತೀರಾ ಕಡಿಮೆ ಇರುತ್ತದೆ. ಗುರುವಾರ ನಸುಕಿನಲ್ಲಿ ವಾಮಾಚಾರ ನಡೆಸಿರಬಹುದು ಎನ್ನುವ ಶಂಕೆಯನ್ನು ಜನ ವ್ಯಕ್ತಪಡಿಸಿದ್ದಾರೆ.  

ಈ ಪ್ರದೇಶಕ್ಕೆ ಸಮೀಪವಾಗಿ ಯಾವುದೇ ರಾಜಕಾರಣಿಗಳ ಮನೆಗಳು ಇಲ್ಲ. ಆದರೆ, ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತರ ನಿವಾಸಗಳು ಈ ಸ್ಥಳಕ್ಕೆ ಹತ್ತಿರವಾಗಿವೆ.

ಲೋಕಸಭೆ ಚುನಾವಣೆ ಭರಾಟೆ ಹೆಚ್ಚಾಗುತ್ತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಮೈಸೂರು ಲೋಕಸಭಾ ಕ್ಷೇತ್ರದಲ್ಲಿಯೂ ಏಪ್ರಿಲ್‌ 18ಕ್ಕೆ ಮತದಾನ ನಡೆದಲಿದೆ. ಈ ವೇಳೆ ವಾಮಾಚಾರದಂತಹ ಘಟನೆ ಬೆಳಕಿಗೆ ಬಂದಿರುವುದು ಅನೇಕರಲ್ಲಿ ಆತಂಕ ಮೂಡಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು