ಮಂಗಳವಾರ, ಮಾರ್ಚ್ 21, 2023
20 °C

ಮೈಸೂರು: ಆ.29ರಂದು ಸೆಲಿಬ್ರಿಟಿಸ್‌ ಫ್ಯಾಷನ್‌ ರನ್‌ವೇ, ಫ್ಯಾಷನ್‌ ಶೋ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಬೆಂಗಳೂರಿನ ಆರ್.ಆರ್. ಗ್ರೂಪ್ಸ್ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಗಸ್ಟ್ 29ರಂದು ಮಧ್ಯಾಹ್ನ 2 ಗಂಟೆಗೆ ‘ಸೆಲಿಬ್ರಿಟಿಸ್‌ ಫ್ಯಾಷನ್‌ ರನ್‌ವೇ’ ಹಾಗೂ ‘ಮಿಸ್ಟರ್‌, ಮಿಸ್‌ ಮತ್ತು ಮಿಸಸ್‌ ಇಂಡಿಯಾ ಫ್ಯಾಷನ್‌ ಶೋ’ ಆಯೋಜಿಸಲಾಗಿದೆ.

‘ಸೆಲಿಬ್ರೆಟಿವ್ ಫ್ಯಾಷನ್‌ ರನ್‌ವೇ’ಯಲ್ಲಿ ಧಾರಾವಾಹಿಗಳ ಪ್ರಧಾನ ಕಲಾವಿದರು ಮಾತ್ರ ಭಾಗವಹಿಸಲಿದ್ದು, ವೇದಿಕೆ ಮೇಲೆ ವಾಕ್‌ ಮಾಡಲಿದ್ದಾರೆ. ಇವರಿಗೆ ಬೇಕಾದ ವಸ್ತ್ರ, ಮೇಕಪ್‌ ಸೌಲಭ್ಯವನ್ನು ಸಂಸ್ಥೆ ವತಿಯಿಂದಲೇ ಪೂರೈಸಲಾಗುತ್ತದೆ. ‘ಮಿಸ್ಟರ್‌, ಮಿಸ್‌ ಮತ್ತು ಮಿಸಸ್‌ ಇಂಡಿಯಾ ಫ್ಯಾಷನ್‌ ಶೋ’ಗೆ ಸಂಬಂಧಿಸಿದಂತೆ ಈಗಾಗಲೇ ಆನ್‌ಲೈನ್‌ ಆಡಿಷನ್‌ ಮಾಡಲಾಗಿದೆ. ಕರ್ನಾಟಕವಲ್ಲದೆ ದೆಹಲಿ, ಕೇರಳ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದಲೂ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. 40ರಿಂದ 50 ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂದು ಆರ್‌.ಆರ್‌.ಗ್ರೂಪ್ಸ್‌ನ ಸಿಇಒ ರಾಕಿಂಗ್‌ ರಾತು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕವೂ ಕೆಲ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಸಕ್ತರು ಆದಷ್ಟು ಬೇಗ ನೋಂದಣಿ ಮಾಡಿಕೊಳ್ಳಬಹುದು. ಆಡಿಷನ್‌ ಶುಲ್ಕ ₹500 ಹಾಗೂ ಆಯ್ಕೆಯಾದ ಬಳಿಕ ಪ್ರತ್ಯೇಕ ಶುಲ್ಕ ವಿಧಿಸಲಾಗುತ್ತದೆ. ಇದಲ್ಲದೆ, ಫ್ಯಾಷನ್‌ ಬಗ್ಗೆ ಆಸಕ್ತಿ ಇರುವ ಬಡ ಪ್ರತಿಭಾವಂತರಿಗೆ ಮಿಸ್ಟರ್‌, ಮಿಸ್‌ ಹಾಗೂ ಮಿಸಸ್‌ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಅವರಿಗೆ ಉಚಿತವಾಗಿ ಎಲ್ಲ ವ್ಯವಸ್ಥೆ ಮಾಡಲಾಗುವುದು. ನೋಂದಣಿಗೆ ಮೊ.ಸಂ. 9740616106 ಸಂಪರ್ಕಿಸಬಹುದು ಎಂದರು.

‘ಕ್ರಿಯೇಟಿವ್‌ ಫೈವ್‌’ ಸಂಸ್ಥಾಪಕಿ ಅರ್ಪಿತಾ ದೇವ್‌ ಮಾತನಾಡಿ, ‘ಫ್ಯಾಷನ್‌ ಶೋ ಆಯೋಜಿಸುವುದಷ್ಟೇ ಅಲ್ಲದೆ, ರೂಪದರ್ಶಿಗಳಲ್ಲಿನ ಪ್ರತಿಭೆಯನ್ನು ಹೊರ ತರುವುದು ಹಾಗೂ ಅವರಿಗೆ ಅಗತ್ಯ ಮಾರ್ಗದರ್ಶನವನ್ನೂ ನೀಡುತ್ತೇವೆ’ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಫ್ಯಾಷನ್‌ ಫೋಟೋಗ್ರಾಫರ್‌ ಪ್ರಾಣೇಶ್‌ ಭಟ್‌, ಮೆಂಟರ್‌ ಸಬ್ರಿನಾ ತರೋನಂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು