ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿಲ್ಲ–ಪ್ರಶಾಂತಗೌಡ
ಮೈಸೂರು: ‘ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ ಎಂಬ ಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ಅವರ ಆರೋಪ ಸತ್ಯಕ್ಕೆ ದೂರ’ ಎಂದು ಕಾಂಗ್ರೆಸ್ ಮುಖಂಡ ಪಿ.ಪ್ರಶಾಂತಗೌಡ ತಿಳಿಸಿದರು.
ಪುರಾತನ ಕಟ್ಟಡಗಳ ನವೀಕರಣಕ್ಕೆ ಅನುಮತಿ ನೀಡಲಾಗಿದೆ, ಗಂಗಮ್ಮನ ಗುಡಿ ರಸ್ತೆಯ ಕಾಂಕ್ರೀಟ್ ಕಾಮಗಾರಿ ಕಳಪೆಯಾಗಿದೆ. ಇ–ಶೌಚಾಲಯಗಳು ಸ್ಥಗಿತಗೊಂಡಿವೆ. ವಿನೋಬಾ ರಸ್ತೆಯಲ್ಲಿ ದ್ವಿಚಕ್ರ ವಾಹನ ನಿಲುಗಡೆ ಸ್ಥಳದಲ್ಲಿ ಅವೈಜ್ಞಾನಿಕವಾಗಿ ಟೈಲ್ಸ್ ಅಳವಡಿಸಲಾಗುತ್ತಿದೆ. ಇದರ ಕುರಿತು ಪ್ರಮೀಳಾ ಭರತ್ ನಿರ್ಲಕ್ಷ್ಯ ತಾಳಿದ್ದಾರೆ ಎಂದು ಅವರು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಮುಖಂಡರಾದ ಪುಷ್ಪವಲ್ಲಿ ಮಾತನಾಡಿ, ‘ನಾವು ವೈಜ್ಞಾನಿಕವಾಗಿ ಕಾಮಗಾರಿ ಮಾಡಿ ಎಂದು ಹೇಳುತ್ತಿದ್ದೇವೆಯೇ ಹೊರತು ದ್ವೇಷದ ರಾಜಕಾರಣ ಮಾಡುತ್ತಿಲ್ಲ’ ಎಂದು ತಿಳಿಸಿದರು.
ಆರೋಪ ನಿರಾಧಾರ– ಪ್ರಮೀಳಾ ಭರತ್
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ‘ಕಟ್ಟಡ ನವೀಕರಣಕ್ಕೆ ಪರವಾನಗಿ ನೀಡುವುದು ಅಧಿಕಾರಿಗಳು. ಇ–ಶೌಚಾಲಯ ದುರಸ್ತಿಗೆ ಆಗ್ರಹಿಸಿ 3 ಬಾರಿ ಪ್ರತಿಭಟನೆ ಮಾಡಿ, ಅದನ್ನು ತೆರೆಸಲಾಗಿತ್ತು. ನಗರಾದ್ಯಂತ ಮತ್ತೆ ಮತ್ತೆ ಅದು ಕೆಡುತ್ತಿದೆ. ಗಂಗಮ್ಮನ ಗುಡಿ ರಸ್ತೆಯ ಕಾಮಗಾರಿ ಕಳಪೆಯಾಗಿದೆ ಎಂದು ಈ ಹಿಂದೆಯೇ ನಾನು ದನಿ ಎತ್ತಿದ್ದೆ ’ ಎಂದು ತಿಳಿಸಿದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.