ಮಂಗಳವಾರ, ಫೆಬ್ರವರಿ 25, 2020
19 °C

ಡಿಸಿಪಿ ವರ್ಗಾವಣೆ: ಹಗ್ಗಜಗ್ಗಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಮೈಸೂರು ನಗರದ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ವರ್ಗಾವಣೆಯ ಹಗ್ಗಜಗ್ಗಾಟ ನಡೆದಿದೆ.

2015ನೇ ಬ್ಯಾಚಿನ ಐಪಿಎಸ್ ಅಧಿಕಾರಿ ಡಾ.ಎ.ಎನ್.ಪ್ರಕಾಶ್‌ಗೌಡ ಗುರುವಾರ ಮತ್ತೆ ಮೈಸೂರು ಡಿಸಿಪಿಯಾಗಿ ವರ್ಗಗೊಂಡಿದ್ದಾರೆ.

ಹಾಲಿ ಡಿಸಿಪಿಯಾಗಿದ್ದ ಮುತ್ತುರಾಜ್ ಅವರಿಗೆ ಯಾವುದೇ ಸ್ಥಳ, ಹುದ್ದೆ ನಿಯುಕ್ತಿಗೊಳಿಸದೆ ವರ್ಗ ಮಾಡಲಾಗಿದೆ.

ಪ್ರಕಾಶ್‌ಗೌಡ ಈ ಹಿಂದೆ ಮುತ್ತುರಾಜ್ ಜಾಗಕ್ಕೆ ಡಿಸಿಪಿಯಾಗಿ ವರ್ಗಾವಣೆಗೊಂಡಿದ್ದರು. ಅಧಿಕಾರವನ್ನು ಸ್ವೀಕರಿಸಿದ್ದರು. ಮುತ್ತುರಾಜ್ ಸಿಎಟಿಯಿಂದ ತಡೆಯಾಜ್ಞೆ ತಂದು, ಅದೇ ಹುದ್ದೆಯಲ್ಲಿ ಮುಂದುವರೆದಿದ್ದರು.

ವಿಚಾರಣೆ ನಡೆಸಿದ ಸಿಎಟಿ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿದ್ದು, ಪ್ರತಿಯನ್ನು ರಾಜ್ಯ ಸರ್ಕಾರದ ಕಾರ್ಯದರ್ಶಿಗೆ ರವಾನಿಸಿದೆ. ಇದರ ಬೆನ್ನಿಗೆ ಈ ವರ್ಗಾವಣೆ ನಡೆದಿದೆ.

ಈ ಹಿಂದೆ ಒಂದು ದಿನವಷ್ಟೇ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದ ಡಾ.ಎ.ಎನ್ ಪ್ರಕಾಶ್‌ಗೌಡ ಇದೀಗ ಮತ್ತೆ ವರ್ಗಾವಣೆಗೊಂಡಿದ್ದು, ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು