ಭಾನುವಾರ, ಜನವರಿ 16, 2022
28 °C

ದಸರೆಗೆ ₹5.42 ಕೋಟಿ ಖರ್ಚು: ಸಚಿವ ಎಸ್.ಟಿ.ಸೋಮಶೇಖರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಈ ಬಾರಿ ದಸರೆಗೆ ₹ 5.42 ಕೋಟಿ ವ್ಯಯ ಮಾಡಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಸರ್ಕಾರ ಒಟ್ಟು ₹ 6 ಕೋಟಿ ಹಣ ನೀಡಿತ್ತು. ಅದರಲ್ಲಿ ₹ 5.42 ಕೋಟಿ ಖರ್ಚು ಮಾಡಲಾಗಿದೆ. ₹57 ಲಕ್ಷ ಉಳಿತಾಯವಾಗಿದೆ ಎಂದು ಇಲ್ಲಿ ಸೋಮವಾರ ಸುದ್ದಿ ಗೋಷ್ಠಿಯಲ್ಲಿ ಹೇಳಿದರು.

ಮಂಡ್ಯ ಜಿಲ್ಲೆಯಲ್ಲಿನ ದಸರೆಗೆ ₹50 ಲಕ್ಷ, ಚಾಮರಾಜನಗರ ಜಿಲ್ಲೆಗೆ ₹ 50 ಲಕ್ಷ ಹಾಗೂ ಹಾಸನ ಜಿಲ್ಲೆಗೆ ₹20 ಲಕ್ಷ ನೀಡಲಾಗಿದೆ. ರಂಗಾಯಣಕ್ಕೆ ₹10 ಲಕ್ಷ,  ಲೋಕೋಪಯೋಗಿ ಇಲಾಖೆಗೆ ₹ 93.80 ಲಕ್ಷ, ಅರಣ್ಯ ಇಲಾಖೆಗೆ ₹ 50 ಲಕ್ಷ ನೀಡಲಾಗಿದೆ ಎಂದರು.

ವರ್ಷಪೂರ್ತಿ ಮೈಸೂರಿನಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸಲು ಮುಖ್ಯಮಂತ್ರಿ ಉತ್ಸುಕರಾಗಿದ್ದಾರೆ. ಸದ್ಯದಲ್ಲೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು