ಮಂಗಳವಾರ, ಜೂನ್ 28, 2022
20 °C

ಮೈಸೂರು: ಅರ್ಧ ಕೆ.ಜಿ. ಬಂಗಾರ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ನಗರದ ಮಂಡಿ ಮೊಹಲ್ಲಾದ ಕರಿಂ ಬ್ಲಾಕ್‌ನ ಸಯ್ಯದ್‌ ಜಾಕೀರ್‌ ಎಂಬುವರ ನಿವಾಸದಲ್ಲಿ 504 ಗ್ರಾಂ ತೂಕದ ಚಿನ್ನಾಭರಣ ಕಳವಾಗಿದೆ.

‘ತಮ್ಮನೊಂದಿಗೆ ಮನೆಯಲ್ಲಿ ಮಲಗಿದ್ದೆ. ರಾತ್ರಿ ವೇಳೆ ಕಿಟಕಿಯಿಂದ ಮುಖ್ಯ ಬಾಗಿಲಿನ ಚಿಲಕ ತೆಗೆದುಕೊಂಡು ಒಳ ನುಗ್ಗಿರುವ ಕಳ್ಳರು, ನಾವು ಮಲಗಿದ್ದ ರೂಮುಗಳ ಬಾಗಿಲನ್ನು ಹೊರಗಿನಿಂದ ಹಾಕಿಕೊಂಡಿದ್ದಾರೆ.

ನಂತರ ಮತ್ತೊಂದು ರೂಮಿನಲ್ಲಿದ್ದ ಬೀರುವಿನ ಬಾಗಿಲು ತೆಗೆದು, ಅದರೊಳಗಿದ್ದ ಅರ್ಧ ಕೆ.ಜಿ.ತೂಕದ ಚಿನ್ನಾಭರಣಗಳನ್ನು ಕದ್ದೊಯ್ದಿದ್ದಾರೆ ಎಂದು ಸಯ್ಯದ್‌ ಜಾಕೀರ್ ದೂರು ಕೊಟ್ಟಿದ್ದಾರೆ’ ಎಂದು ಮಂಡಿ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು