ಮೈಸೂರು: ಕನ್ನಡದ ಉಳಿವು, ಬೆಳವಣಿಗೆಗೆ ಶ್ರಮಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಸರ್ಕಾರ ಯಾವತ್ತೂ ಬೆಂಬಲ ನೀಡುತ್ತದೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ್ದ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವಿವಿಧ ಜಿಲ್ಲೆಗಳಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನವರು ಹೇಳಿದ ಕೆಲಸವನ್ನುಪ್ರಾಮಾಣಿಕವಾಗಿ ಮಾಡಿದ್ದೇನೆ. ಸರ್ಕಾರದಿಂದ ಸಹಾಯ ಒದಗಿಸಿಕೊಟ್ಟಿದ್ದೇನೆ. ಮೈಸೂರಿನಲ್ಲಿ ಜಿಲ್ಲಾ ಕಸಾಪ ಹಲವು ವರ್ಷಗಳಿಂದ ಒಳ್ಳೆಯ ಕೆಲಸವನ್ನು ಮಾಡುತ್ತಾ ಬಂದಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಕೆಲವರನ್ನು ಪ್ರಶಸ್ತಿಯು ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ಮತ್ತೆ ಕೆಲವರು ಲಾಬಿ ಮಾಡಿ ಪ್ರಶಸ್ತಿ ಗಿಟ್ಟಿಸಿಕೊಳ್ಳುವರು. ಸಾಧನೆ ಮಾಡಿದರೂ ಯಾವುದೇ ಪ್ರಶಸ್ತಿ ಪಡೆಯದವರು ನಮ್ಮ ನಡುವೆ ಇದ್ದಾರೆ. ಅವರ ಬಗ್ಗೆಯೂ ನಾವು ಯೋಚನೆ ಮಾಡಬೇಕು’ ಎಂದು ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಹೇಳಿದರು.

16 ಮಂದಿಗೆ ಪ್ರಶಸ್ತಿ ಪ್ರದಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ.ಎಚ್.ಎಸ್.ಸುಜಾತಾ (ಸಾಹಿತ್ಯ), ಕಾಳಪ್ಪ ಪಿರಿಯಾಪಟ್ಟಣ (ಕೃಷಿ), ಡಾ.ಎ.ಪುಷ್ಪಾ ಅಯ್ಯಂಗಾರ್, ವಿದ್ಯಾಸಾಗರ ಕದಂಬ, ಜೆ.ಜಯಂತ್, ವಿಕ್ರಂ ಅಯ್ಯಂಗಾರ್ (ಸಮಾಜಸೇವೆ), ಕವಿತಾ ಕಾಮತ್ (ಸುಗಮ ಸಂಗೀತ), ರಂಗಧಾಮಯ್ಯ (ಕನ್ನಡ ಹೋರಾಟ), ಡಾ.ಬಿ.ಎಸ್.ಮಂಜುನಾಥ್ (ರಕ್ತನಿಧಿ), ಎನ್.ಬಿ.ಕಾವೇರಪ್ಪ (ಚಿತ್ರಕಲೆ), ಡಾ.ಎಸ್.ಸಿ.ಸುರೇಶ್ (ಪಶುವೈದ್ಯಕೀಯ), ವೈ.ಎಸ್.ರಾಮಸ್ವಾಮಿ, ನಿಂಗರಾಜು ಚಿತ್ತಣ್ಣನವರ್ (ಕನ್ನಡ ಸೇವೆ),
ಡಾ.ಟಿ.ರವಿಕುಮಾರ್ (ವೈದ್ಯಕೀಯ), ಬಿ.ಕೆ.ಯದುನಾಥ್ (ಸಹಕಾರ) ಮತ್ತು ಎನ್.ಅನಂತು (ಯೋಗ) ಅವರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಡಾ.ಸಿ.ಪಿ.ಸಿದ್ದಾಶ್ರಮ, ಡಾ.ವಿ.ಮುನಿವೆಂಕಟಪ್ಪ, ಸಿ. ಮಹೇಶ್ವರನ್, ಡಾ.ಪುಟ್ಟಸಿದ್ದಯ್ಯ, ಡಾ.ಆರ್.ರಾಮಕೃಷ್ಣ, ಡಾ.ಎ.ಎಸ್.ಚಂದ್ರಶೇಖರ್ ಮತ್ತು ಎನ್.ಎಸ್.ಜನಾರ್ದನಮೂರ್ತಿ ಅವರನ್ನು ಅಭಿನಂದಿಸಲಾಯಿತು.

ಮೈಸೂರು ನಗರ ಕನ್ನಡ ಜಾಗೃತ ಸಮಿತಿ ಸದಸ್ಯರು ಮತ್ತು ಮೈಸೂರು ಜಿಲ್ಲಾ ಕನ್ನಡ ಜಾಗೃತ ಸಮಿತಿ ಸದಸ್ಯರನ್ನು ಸನ್ಮಾನಿಸಲಾಯಿತು.

ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಪ್ರಸ್ತಾವಿಕವಾಗಿ ಮಾತನಾಡಿದರು.

ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಗುಬ್ಬಿಗೂಡು ರಮೇಶ್, ಪಾಲಿಕೆ ಹೆಚ್ಚುವರಿ ಆಯುಕ್ತ ಎನ್.ಎಂ.ಶಶಿಕುಮಾರ್, ರಾಜಶೇಖರ ಕದಂಬ, ಮೂಗೂರು ನಂಜುಂಡಸ್ವಾಮಿ, ಎಂ.ಚಂದ್ರಶೇಖರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.