ಭಾನುವಾರ, ಜನವರಿ 26, 2020
28 °C

ಪೌರತ್ವ ಕಾಯ್ದೆ ಪರ ಇರುವವರು ನಗರ ಭಯೋತ್ಪಾದಕರು: ಮಹೇಶ್‌ ಚಂದ್ರಗುರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಪೌರತ್ವ (ತಿದ್ದುಪಡಿ) ಕಾಯ್ದೆಯ ಪರ ಇರುವವರು ನಗರ ಭಯೋತ್ಪಾದಕರು ಎಂದು ನಿವೃತ್ತ ಪ್ರಾಧ್ಯಾಪಕ ಮಹೇಶ್‌ಚಂದ್ರಗುರು ಟೀಕಿಸಿದರು.

ಪ್ರಜಾಪ್ರಭುತ್ವವನ್ನು ಈ ಭಯೋತ್ಪಾದಕರು ಹಾಳು ಮಾಡುತಿದ್ದಾರೆ. ಇದು ಆರ್ಯನ್ನರು ಮತ್ತು ದ್ರಾವಿಡರ ಮಧ್ಯದ ಕದನವಾಗಿದೆ ಎಂದು ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ವ್ಯಾಖ್ಯಾನಿಸಿದರು.

ಕಾಯ್ದೆಯ ವಿರುದ್ಧ ಹೋರಾಡಿದವರ ಕುರಿತು ಸಂಸದ ತೇಜಸ್ವಿ ಸೂರ್ಯ ಕಳಪೆಯಾಗಿ ಮಾತನಾಡಿದ್ದಾರೆ. ಇವರಿಗೆ ತೇಜಸ್ವಿ ಬದಲು ಅಮಾವಾಸೆಯ ಕತ್ತಲೆ ಎಂದು ಹೆಸರಿಡಬೇಕು ಎಂದು ವ್ಯಂಗ್ಯವಾಡಿದರು.

ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಕೆ.ಎಸ್.ಶಿವರಾಮು ಮಾತನಾಡಿ, ಡಿ. 24ರಂದು ಬೆಳಿಗ್ಗೆ 11 ಗಂಟೆಗೆ ಇಲ್ಲಿನ ಪುರಭವನದ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು