ಸೋಮವಾರ, ಅಕ್ಟೋಬರ್ 26, 2020
21 °C
ತಾಯಿಯೊಂದಿಗೆ 20ಕ್ಕೂ ಅಧಿಕ ರಾಜ್ಯಗಳು, 3 ದೇಶಗಳಿಗೆ ಭೇಟಿ

ಬಜಾಜ್‌ ಚೇತಕ್‌ನಲ್ಲಿ 56,522 ಕಿ.ಮೀ ಕ್ರಮಿಸಿದ ‘ಆಧುನಿಕ ಶ್ರವಣಕುಮಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ತಂದೆ ದಕ್ಷಿಣಾಮೂರ್ತಿ ಕೊಡಿಸಿದ್ದ ಬಜಾಜ್‌ ಚೇತಕ್‌ ಸ್ಕೂಟರ್‌ನಲ್ಲಿ ‘ಆಧುನಿಕ ಶ್ರವಣಕುಮಾರ’ ಎಂದೇ ಖ್ಯಾತರಾದ ಡಿ.ಕೃಷ್ಣಕುಮಾರ್ (42) ಕ್ರಮಿಸಿದ್ದು 56,522 ಕಿ.ಮೀ. 20ಕ್ಕೂ ಅಧಿಕ ರಾಜ್ಯಗಳು ಹಾಗೂ ನೇಪಾಳ, ಭೂತಾನ್ ಹಾಗೂ ಮ್ಯಾನ್ಮಾರ್‌ ದೇಶಗಳನ್ನು ಸುತ್ತಿ ಬುಧವಾರ ನಗರದ ಸ್ವಗೃಹವನ್ನು ತಾಯಿ ಚೂಡಾರತ್ನಾ (70) ಅವರೊಂದಿಗೆ ತಲುಪಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೃಷ್ಣಕುಮಾರ್, ‘2018ರ ಜನವರಿಯಿಂದ ಇಲ್ಲಿಯವರೆಗೆ ಕೈಗೊಂಡ ‘ಮಾತೃ ಸೇವಾ ಸಂಕಲ್ಪ ಯಾತ್ರೆ’ಯನ್ನು ಪ್ರತಿಕ್ಷಣವೂ ಅನುಭವಿಸಿದ್ದೇನೆ. ಈ ಪುಣ್ಯಭೂಮಿಯಲ್ಲಿ ಜನಿಸಿರುವುದು ನಿಜಕ್ಕೂ ದೊಡ್ಡದು ಎಂಬ ಭಾವನೆ ಮೂಡಿದೆ’ ಎಂದು ಸಂತಸ ಹಂಚಿಕೊಂಡರು.

‘2 ವರ್ಷ 9 ತಿಂಗಳುಗಳ ಕಾಲ ಅಪ್ಪ ಕೊಡಿಸಿದ್ದ ‘ಬಜಾಜ್ ಚೇತಕ್’ ಸ್ಕೂಟರ್‌ನಲ್ಲಿನ ಪ್ರಯಾಣ ಯಾವುದೇ ಕಷ್ಟ ನೀಡಲಿಲ್ಲ. ಅಪ್ಪನೂ ನಮ್ಮೊಂದಿಗೆ ಬರುತ್ತಿದ್ದಾರೆ ಎಂಬ ಭಾವನೆ ಮೂಡಿಸಿತು. ಲಾಕ್‌ಡೌನ್‌ ಆದಾಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ಮಾಡಿ ತಾಯಿಯವರನ್ನು ಜೋಪಾನವಾಗಿ ನೋಡಿಕೊ ಎಂದು ಹೇಳಿ ಭೂತಾನ್‌ನ ಗಡಿಯಲ್ಲಿದ್ದ ನಮಗೆ ವಿಶ್ವಾಸ ತುಂಬಿದರು. ಅಲ್ಲಿಂದ ಹೊರಟು 2 ತಿಂಗಳ ಹಿಂದೆ ರಾಜ್ಯಕ್ಕೆ ಬಂದೆ’ ಎಂದು ಹೇಳಿದರು.

‘ಮುಂದೆ ಸ್ವಗೃಹದಲ್ಲಿ ಜ್ಞಾನವಿಕಾಸ ಕೇಂದ್ರವನ್ನು ತೆರೆಯುವ ಯೋಚನೆ ಇದೆ. ಮಕ್ಕಳಿಗೆ ಬಾಲ್ಯದಲ್ಲೇ ವ್ಯಕ್ತಿತ್ವ ನಿರ್ಮಾಣ ಮಾಡುವಂತಹ ಕೆಲಸ ಮಾಡುವೆ’ ಎಂದು ತಿಳಿಸಿದರು.

ಮಹೀಂದ್ರ ಕಂಪನಿಯವರು ಕೃಷ್ಣಕುಮಾರ್ ಅವರಿಗೆ ‘ಮಹೀಂದ್ರ ಕೆಯುವಿ’ ಕಾರನ್ನು ಉಡುಗೊರೆಯಾಗಿ ಶುಕ್ರವಾರ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು