ಶನಿವಾರ, ಫೆಬ್ರವರಿ 22, 2020
19 °C

ಮೈಸೂರಿನಿಂದ ಚೆನ್ನೈಗೆ ಮತ್ತೊಂದು ವಿಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮೈಸೂರಿನಿಂದ ಚೆನ್ನೈಗೆ ಮತ್ತೊಂದು ವಿಮಾನಯಾನ ಸಂಪರ್ಕ ಆರಂಭವಾಗಿದೆ. ಸಂಸದ ಪ್ರತಾಪಸಿಂಹ ಅವರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬೆಳಿಗ್ಗೆ ವಿಮಾನಸೇವೆಗೆ ಚಾಲನೆ ನೀಡಿದರು.

ಪ್ರತಿದಿನ ಬೆಳಿಗ್ಗೆ 6.50ಕ್ಕೆ ಚೆನ್ನೈನಿಂದ ಹೊರಡಲಿರುವ ವಿಮಾನ 8.10ಕ್ಕೆ ಮೈಸೂರು ತಲುಪಲಿದೆ. ಬೆಳಿಗ್ಗೆ 8.30ಕ್ಕೆ ಮೈಸೂರಿನಿಂದ ಹೊರಟು 10 ಕ್ಕೆ ಚೆನ್ನೈ ತಲುಪಲಿದೆ.

ಟ್ರೂಜೆಟ್‌ ಸಂಸ್ಥೆ ಆರಂಭಿಸಿರುವ ಈ ವಿಮಾನ ಸೇವೆ ಕೇಂದ್ರ ಸರ್ಕಾರದ ‘ಉಡಾನ್‌’ ಯೋಜನೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ. ಸರ್ಕಾರದಿಂದ ಯಾವುದೇ ಸಬ್ಸಿಡಿ ಪಡೆಯದೆ ಸೇವೆ ಒದಗಿಸಲಿದೆ.

72 ಆಸನಗಳ ವಿಮಾನ ಇದಾಗಿದ್ದು, ಶುಕ್ರವಾರ ಬೆಳಿಗ್ಗೆ ಚೆನ್ನೈನಿಂದ ಮೈಸೂರಿಗೆ 28 ಪ್ರಯಾಣಿಕರು ಬಂದರೆ, ಮೈಸೂರಿನಿಂದ ಚೆನ್ನೈಗೆ 22 ಮಂದಿ ಪ್ರಯಾಣಿಸಿದರು.

ಮೈಸೂರಿನಿಂದ ಬೆಂಗಳೂರು, ಹೈದರಾಬಾದ್‌, ಕೊಚ್ಚಿ, ಗೋವಾ ಮತ್ತು ಚೆನ್ನೈಗೆ ಈಗ ಒಟ್ಟು ಏಳು ವಿಮಾನಗಳು ಹಾರಾಟ ನಡೆಸುತ್ತಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು