ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಕರಿನೆರಳಿನಲ್ಲಿ ವರ್ಷಾಚರಣೆ

ಹೋಟೆಲ್ ಉದ್ಯಮಕ್ಕೆ ಭಾರಿ ಹೊಡೆತ, ಗಿಜಿಗುಡುತ್ತಿದ್ದ ಬೇಕರಿಗಳು
Last Updated 1 ಜನವರಿ 2021, 2:38 IST
ಅಕ್ಷರ ಗಾತ್ರ

ಮೈಸೂರು: ಕೊರೊನಾ ಸೋಂಕಿನ ಕರಿ ನೆರಳಿನಲ್ಲಿ ಈ ಬಾರಿಯ ಹೊಸ ವರ್ಷಾಚರಣೆ ನಗರದಲ್ಲಿ ನಡೆದಿದೆ. ಒಂದೆಡೆ ಹೋಟೆಲ್ ಉದ್ಯಮಕ್ಕೆ ಅತೀವ ನಷ್ಟ ಉಂಟು ಮಾಡಿದ್ದರೆ, ಮತ್ತೊಂ
ದೆಡೆ ಬೇಕರಿ ಮತ್ತು ಮದ್ಯದಂಗಡಿಗಳು ಜನರಿಂದ ತುಂಬಿ ಹೋಗಿದ್ದ ದೃಶ್ಯಗಳು ಗುರುವಾರ ಕಂಡು ಬಂತು.

ರಸ್ತೆಗಳಲ್ಲಿ ಹಿಂದಿನ ವರ್ಷಗಳಂತೆ ಸಂಭ್ರಮದ ಕಳೆ ಕಾಣಲಿಲ್ಲ. ನಿತ್ಯದಂತೆ ಸಂಚಾರ ಹಲವು ರಸ್ತೆಗಳಲ್ಲಿ ಕಂಡು ಬಂತು. ಅರಮನೆ ಸುತ್ತಲಿನ ರಸ್ತೆಗಳು ಬಿಕೊ ಎನ್ನುತ್ತಿದ್ದವು.

ಮದ್ಯದಂಗಡಿಗಳು ಹಾಗೂ ಬೇಕರಿಗಳು ಜನರಿಂದ ತುಂಬಿ ತುಳುಕುತ್ತಿ
ದ್ದವು. ಹಲವು ಪ್ರತಿಷ್ಠಿತ ಬೇಕರಿಗಳು ತಮ್ಮ ಅಂಗಡಿಗಳಿಗೆ ವಿಶೇಷ ಅಲಂಕಾರ
ಗಳನ್ನು ಮಾಡಿ ಜನರನ್ನು ಸೆಳೆಯುತ್ತಿ
ದ್ದವು. ವಿದ್ಯುತ್ ದೀಪಾಲಂಕರಾಗಳು ಮಾತ್ರವಲ್ಲ ಶಾಮಿಯಾನ ಹಾಕಿ ಗ್ರಾಹಕ
ರನ್ನು ಸೆಳೆಯುವ ಕಸರತ್ತು ನಡೆದಿತ್ತು.

ಬೇಕರಿಗಳಲ್ಲಿ ವಿಶೇಷ ವಿನ್ಯಾಸಗಳ ಕೇಕ್‌ಗಳನ್ನು ತಯಾರಿಸಲಾಗಿತ್ತು. ಗಾತ್ರ ಮತ್ತು ವಿನ್ಯಾಸಕ್ಕೆ ತಕ್ಕಂತೆ ದರ ನಿಗದಿಯಾಗಿತ್ತು. ಕೇಕ್ ಖರೀದಿಗೆ ಯುವತಿಯರೂ ಸೇರಿದಂತೆ ಯುವ ಸಮುದಾಯ ಮುಗಿಬಿದ್ದಿತ್ತು.

ಮದ್ಯದಂಗಡಿಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಹಲವು ತೆರನಾದ ಮದ್ಯದ ಬಾಟಲಿಗಳನ್ನು ಖರೀದಿಸಿ ತಮ್ಮ ತಮ್ಮ ಮನೆ ಅಥವಾ ರೂಂಗಳಿಗೆ ಕೊಂಡೊಯ್ದು ಮನೆಗಳಲ್ಲೇ ಔತಣಕೂಟ ನಡೆಸಿದರು. ಹೋಟೆಲ್‌ಗಳಲ್ಲಿ ವಿಶೇಷ ಕಾರ್ಯಕ್ರಮಗಳು ಇಲ್ಲದ್ದರಿಂದ ಮದ್ಯದಂಗಡಿಗಳಿಗೆ ಹೆಚ್ಚಿನ ಜನರು ಬರುವಂತಾಯಿತು.

ಮಂಕಾದ ಹೋಟೆಲ್‌ಗಳು: ನಗರದ ಬಹುತೇಕ ಹೋಟೆಲ್‌ಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಇರಲಿಲ್ಲ. ಔತಣಕೂಟಗಳು ತೀರಾ ಬೆರಳೆಣಿಕೆ ಸಂಖ್ಯೆಯಷ್ಟು ಇದ್ದವು. ಹಿಂದಿನ ವರ್ಷಗಳಂತೆ ಫ್ಯಾಷನ್ ಶೊಗಳಾಗಲಿ, ವಿಶೇಷ ಮನರಂಜನಾ ಕಾರ್ಯಕ್ರಮಗಳಾಗಲಿ, ನೃತ್ಯ, ಸಂಗೀತದ ಸಂಜೆಗಳಾಗಲಿ ಆಯೋಜನೆಗೊಂಡಿರಲಿಲ್ಲ. ಎಂದಿನಂತೆ ಹೋಟೆಲ್‌ಗಳಲ್ಲಿ ಸಾಮಾನ್ಯ ಸ್ಥಿತಿ ಇತ್ತು.‌

ನಿಷೇಧಾಜ್ಞೆ ಹೇರಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಹೋಟೆಲ್‌ಗಳಿಗೆ ಭೋಜನದಂತಹ ಕಾರ್ಯಕ್ರಮಕ್ಕೂ ಬಂದಿರಲಿಲ್ಲ. ಬೆರಳೆಣಿಕೆಯಷ್ಟು ಹೋಟೆಲ್‌ಗಳಲ್ಲಿ ಮಾತ್ರವೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಾಣಿಸಿಕೊಂಡರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹೋಟೆಲ್ ಮಾಲೀಕರ ಸಂಘದ ನಗರ ಘಟಕದ ಅಧ್ಯಕ್ಷ ಸಿ.ನಾರಾಯಣಗೌಡ, ‘ಕೇವಲ ಒಂದು ದಿನಕ್ಕೆ ಹೋಟಲ್ ಉದ್ಯಮಕ್ಕೆ ₹ 2 ಕೋಟಿಯಷ್ಟು ನಷ್ಟ ಉಂಟಾಗಿದೆ. ಯಾವುದೇ ಹೋಟೆಲ್‌ಗಳಲ್ಲೂ ಔತಣಕೂಟಗಳು ನಡೆದಿಲ್ಲ’ ಎಂದು ತಿಳಿಸಿದರು.

ರಾತ್ರಿ 12 ಗಂಟೆಯಾಗುತ್ತಿದ್ದಂತೆ ಹಲವೆಡೆ ಪಟಾಕಿ ಸಿಡಿಸಿ ಜನರು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT