ಮಂಗಳವಾರ, ಫೆಬ್ರವರಿ 18, 2020
17 °C

ಆದಾಯ ತೆರಿಗೆ ಇಲಾಖೆ ಕಚೇರಿಗೆ ರಶ್ಮಿಕಾ ಮಂದಣ್ಣ ಹಾಜರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ನಗರದ ನಜರ್‌ಬಾದ್‌ನಲ್ಲಿರುವ ಪ್ರಧಾನ ಆದಾಯ ತೆರಿಗೆ ಆಯುಕ್ತರ ಕಚೇರಿಗೆ ಮಂಗಳವಾರ ಹಾಜರಾದರು.

ಹೈದರಾಬಾದ್‌ನಲ್ಲಿ ಸಿನಿಮಾವೊಂದರ ಪ್ರಚಾರ ಕಾರ್ಯಕ್ರಮದಲ್ಲಿದ್ದ ರಶ್ಮಿಕಾ ಅವರಿಗೆ ವಿಚಾರಣೆಗೆ ಬರಲು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸೂಚಿಸಿದ್ದರು. ಹೀಗಾಗಿ, ಅವರು ಹೈದರಬಾದ್‌ನಿಂದ ಬೆಳಗಾವಿ, ಬೆಳಗಾವಿಯಿಂದ ವಿಮಾನದ ಮೂಲಕ ಮೈಸೂರು ತಲುಪಿದರು ಎನ್ನಲಾಗಿದೆ.

ಇಲ್ಲಿ ಇವರು 9 ಮಂದಿಯೊಂದಿಗೆ 2 ಬ್ಯಾಗ್‌ಗಳು ಮತ್ತು ಒಂದು ಕಿಟ್‌ನಲ್ಲಿ ದಾಖಲಾತಿಗಳನ್ನು ತೆಗೆದುಕೊಂಡು ಕಚೇರಿ ಪ್ರವೇಶಿಸಿದ್ದಾರೆ.

ಇದಕ್ಕೂ ಮುನ್ನ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರಶ್ಮಿಕಾ ಮಂದಣ್ಣ ಅವರ ತಂದೆ ಮದನ್ ಮಂದಣ್ಣ, ‘ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೆಲವೊಂದು ದಾಖಲಾತಿಗಳನ್ನು ಕೇಳಿದ್ದಾರೆ. ಅವರಿಗೆ ಕೊಡಲು ಬಂದಿದ್ದೇವೆ. ಇಷ್ಟು ಬಿಟ್ಟು ಬೇರಿನ್ನೇನು ಗೊತ್ತಿಲ್ಲ’ ಎಂದು ತಿಳಿಸಿದ್ದಾರೆ.

ಶುಕ್ರವಾರವಷ್ಟೇ ರಶ್ಮಿಕಾ ಮಂದಣ್ಣ ಅವರ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ  ನಡೆಸಿದ್ದರು. ಈ ವೇಳೆ ಮಂಗಳವಾರ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು