ಶನಿವಾರ, ಆಗಸ್ಟ್ 13, 2022
24 °C

ಸಚಿವ ಸಂಪುಟ ವಿಸ್ತರಣೆ: ತಾಯಿ ಮಕ್ಕಳಿಗೆ ಮೋಸ ಮಾಡಲ್ಲ ಎಂದ ಶಾಸಕ ಎಸ್.ಎ. ರಾಮದಾಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

SA Ramadas

ಮೈಸೂರು: ತಾಯಿ ಮಕ್ಕಳಿಗೆ ಮೋಸ ಮಾಡಲ್ಲ ಎಂದು ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಶಾಸಕ ಎಸ್.ಎ. ರಾಮದಾಸ್ ತಿಳಿಸಿದ್ದಾರೆ.

ಸಚಿವ ಸಂಪುಟಕ್ಕೆ ಯಾರನ್ನು ತಗೆದುಕೊಳ್ಳಬೇಕು ಬೀಡಬೇಕು ಎಂಬುದನ್ನ ನಿರ್ಧಾರ ಮಾಡೋದು ಕ್ಯಾಪ್ಟನ್. ಪಕ್ಷದ ಹಿರಿಯರಾಗಿ ಏನು ಮಾಡಬೇಕೆಂಬುದು ಅವರಿಗೆ ಗೊತ್ತಿದೆ. ಅತಿಥಿಗಳಿಗೆ ಊಟ ಹಾಕಬೇಕೋ, ಮನೆಯವರಿಗೆ ಊಟ ಹಾಕಬೇಕೋ ಎಂಬುದನ್ನ ಮನೆಯ ತಾಯಿ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

ನಾನು ಪಕ್ಷದ ಅತ್ಯಂತ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರು ನಿರ್ವಹಿಸಲು ಸಿದ್ದನಿದ್ದೇನೆ. ಸಂಪುಟದಲ್ಲಿ ಅವಕಾಶ ಸಿಕ್ಕರೆ ಕೆಲಸ‌ ಮಾಡುತ್ತೇನೆ. ಇಲ್ಲವಾದರೆ ಶಾಸಕನಾಗಿ ಇರುತ್ತೇನೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು