ಶನಿವಾರ, ಮೇ 21, 2022
24 °C
ಅಡುಗೆ ಸ್ಪರ್ಧೆಗೆ 12 ಸ್ಪರ್ಧಿಗಳು: ಮೂವರಿಗೆ ಬಹುಮಾನ

ಅಡುಗೆ ಸ್ಪರ್ಧೆಗೆ 12 ಸ್ಪರ್ಧಿಗಳು: ಮೂವರಿಗೆ ಬಹುಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಎರಡು ದಿನ ನಡೆದ ಗೆಡ್ಡೆ–ಗೆಣಸು ಮೇಳಕ್ಕೆ ಭಾನುವಾರ ರಾತ್ರಿ ತೆರೆ ಬಿದ್ದಿತು.

ವಾರಾಂತ್ಯದ ದಿನಗಳಾಗಿದ್ದರಿಂದ ಅಪಾರ ಸಂಖ್ಯೆಯ ಮೈಸೂರಿಗರು ಮೇಳಕ್ಕೆ ಭೇಟಿ ನೀಡಿ, ಗೆಡ್ಡೆ–ಗೆಣಸಿನ ಖಾದ್ಯಗಳನ್ನು ಸವಿದರು. ತರಹೇವಾರಿ ಗೆಡ್ಡೆಗಳನ್ನು ಕಣ್ತುಂಬಿಕೊಂಡರು. ಸಾವಯವ ತರಕಾರಿ ಬೀಜಗಳನ್ನು ಖರೀದಿಸಿ ಮನೆಗೆ ಕೊಂಡೊಯ್ದರು.

ಮೇಳದ ಅಂಗವಾಗಿ ಭಾನುವಾರ ‘ಅಡುಗೆ ಸ್ಪರ್ಧೆ’ ನಡೆಯಿತು. 12 ಸ್ಪರ್ಧಿಗಳು ಗೆಡ್ಡೆ–ಗೆಣಸಿನ ವಿವಿಧ ಖಾದ್ಯವನ್ನು ಸ್ಪರ್ಧೆಗಾಗಿಯೇ ತಯಾರಿಸಿಕೊಂಡು ತಂದಿದ್ದರು.

ಶತಾವರಿ ಬೇರಿನ ಔಷಧೀಯ ಜಾಮೂನು, ಸಿಹಿ ಗೆಣಸಿನ ಸಮೋಸ, ಕರ್ಜಿಕಾಯಿ, ಪೂರಿ, ಲಡ್ಡು–ಪಾಯಸ, ಮರಗೆಣಸಿನ ಪಲ್ಯ–ರೊಟ್ಟಿ, ಪರ್ಪಲ್ ಯಾಮ್‌ನ ಪಲ್ಯ–ಜ್ಯೂಸ್ ಮೊದಲಾದ ತಿನಿಸುಗಳನ್ನು ಸ್ಪರ್ಧಿಗಳು ಪ್ರದರ್ಶಿಸಿದರು.

ಶ್ರೀದೇವಿ ಪಿ.ಹೆಗಡೆ ಅವರಿಗೆ ಮೊದಲ ಬಹುಮಾನ, ಮಂಜುಳಾ ಪ್ರಕಾಶ್‌ಗೆ ಎರಡನೇ ಬಹುಮಾನ, ರತಿ ಸಂತೋಷಿ ಅವರಿಗೆ ಮೂರನೇ ಬಹುಮಾನ ಲಭಿಸಿತು.

ಸಂತೋಷ ಕೌಲಗಿ, ವಿನಯ ಚಂದ್ರ, ಸೀಮಾ ಪ್ರಸಾದ್ ತೀರ್ಪುಗಾರರಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು