ಬುಧವಾರ, ಆಗಸ್ಟ್ 4, 2021
22 °C

ಇಬ್ಬರು ಕೊರೊನಾ ಸೋಂಕಿತರು ನಾಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಇಬ್ಬರು ಕೊರೊನಾ ಸೋಂಕಿತರು ತಪ್ಪು ವಿಳಾಸ ಮತ್ತು ತಪ್ಪು ಮೊಬೈಲ್ ಸಂಖ್ಯೆ ನೀಡಿದ್ದು, ಅವರ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ.

‘ಮೂರು ದಿನಗಳ ಹಿಂದೆಯಷ್ಟೇ ಇವರು ತಮ್ಮ ಗಂಟಲು ದ್ರವವನ್ನು ಪರೀಕ್ಷೆಗೆ ನೀಡಿದ್ದರು. ವರದಿಯು ಪಾಸಿಟಿವ್ ಬಂದಿದೆ. ಆದರೆ, ಅವರು ನೀಡಿದ ವಿಳಾಸಕ್ಕೆ ಹೋದಾಗ ಅಲ್ಲಿರಲಿಲ್ಲ. ಮೊಬೈಲ್ ಸಂಖ್ಯೆಯನ್ನೂ ತಪ್ಪಾಗಿ ನೀಡಿದ್ದಾರೆ.  ಆರೋಗ್ಯ ಇಲಾಖೆಯು ನಮಗೆ ಮಾಹಿತಿ ನೀಡಿದ್ದು, ಹುಡುಕಾಟ ನಡೆಸುತ್ತಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು