ಮೈಸೂರು: ಮಂಡಿ ಮೊಹಲ್ಲಾದಲ್ಲಿರುವ ಖಾಜಿ ರಸ್ತೆಯಲ್ಲಿ ಮನೆಯೊಂದಕ್ಕೆ ಬುಧವಾರ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಮನೆಯೊಳಗಿದ್ದ ಸಿದ್ದನಾಯ್ಕ (60) ಸಜೀವ ದಹನವಾಗಿದ್ದಾರೆ.

'ಸಿದ್ದನಾಯ್ಕ ಗುಜರಿ ವ್ಯಾಪಾರ ಮಾಡುತ್ತಿದ್ದರು. ಮನೆಯಲ್ಲಿ ಜೋಡಿಸಿದ್ದ ಹಳೆ ಸಾಮಾಗ್ರಿಗೆ ಬೆಂಕಿ ತಗುಲಿದ್ದು, ಮೇಲ್ನೋಟಕ್ಕೆ ಬೀಡಿ ಸೇದಿ ಎಸೆದ ಪರಿಣಾಮ ಬೆಂಕಿ ಹತ್ತಿಕೊಂಡು ಉರಿದೆ. ಅವರ ಪತ್ನಿ ಪುಟ್ಟಮ್ಮ ಹಾಗೂ ಮೊಮ್ಮಗಳು ಲಕ್ಷ್ಮಿ ಹೊರಗೆ ತೆರಳಿದ್ದಾಗ ಘಟನೆ ನಡೆದಿದೆ' ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು, ಸಿದ್ದನಾಯ್ಕ ಮೃತದೇಹ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಂಡಿ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.