ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುತ್ತೂರು ಮಠಕ್ಕೆ ರೋಬೋ ಆನೆ ಸಮರ್ಪಿಸಿದ ನಟ ದಿಗಂತ್ ದಂಪತಿ

Published 10 ಏಪ್ರಿಲ್ 2024, 13:39 IST
Last Updated 10 ಏಪ್ರಿಲ್ 2024, 13:39 IST
ಅಕ್ಷರ ಗಾತ್ರ

ನಂಜನಗೂಡು: ತಾಲ್ಲೂಕಿನ ಸುತ್ತೂರು ಕ್ಷೇತ್ರಕ್ಕೆ ಚಲನಚಿತ್ರ ನಟಿ ಐಂದ್ರಿತಾ ರೇ ಹಾಗೂ ನಟ ದಿಗಂತ್ ದಂಪತಿಗಳು ಶಿವರಾತ್ರಿ ದೇಶಿಕೇಂದ್ರ ಸ್ವಾಮಿಜೀಯವರ ಸಮ್ಮುಖದಲ್ಲಿ ರೋಬೋ ಆನೆ (ಶಿವ)ಯನ್ನು ಸಮರ್ಪಿಸಿದರು.

ಐಂದ್ರಿತಾ ರೇ ಮಾತನಾಡಿ, ‘ಆನೆ ಆಹಾರ ಮತ್ತು ನೀರನ್ನು ಅರಸಿ ಕಾಡಿನಿಂದ ನಾಡಿಗೆ ಬರುತ್ತಿವೆ. ದಿನೇ ದಿನೇ ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷ ಹೆಚ್ಚಾಗುತ್ತಿದೆ, ಆನೆಗಳು ನಾಡಿಗೆ ನುಗ್ಗುವುದರಿಂದ ಜನರೂ ತೊಂದರೆ ಅನುಭವಿಸುತ್ತಿದ್ದಾರೆ. ಆನೆಗಳೂ ಸ್ವಚ್ಛಂದವಾಗಿ ವಿಹರಿಸುವ ಸ್ವಾತಂತ್ರವಿಲ್ಲದೆ ನೋವು ಅನುಭವಿಸುತ್ತಿವೆ. ಈ ಸನ್ನಿವೇಶದಲ್ಲಿ ಮಠವು ಧಾರ್ಮಿಕ ಕಾರ್ಯಗಳಿಗಾಗಿ ರೋಬೋ ಆನೆಯನ್ನು ಬಳಸಲು ಪ್ರಾರಂಭಿಸುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.

ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಭಗವಂತ ಸೃಷ್ಟಿಯಲ್ಲಿ ಪ್ರಾಣಿ ಪಕ್ಷಿಗಳಿಗೂ ಮನುಷ್ಯನಂತೇ ಸ್ವತಂತ್ರವಾಗಿ ಬದುಕುವ ಹಕ್ಕಿದೆ. ಸಾಕು ಪ್ರಾಣಿಗಳಿಗೆ ಇಂದಿನ ದಿನಗಳಲ್ಲಿ ತುಂಬಾ ಮಾನ್ಯತೆಯನ್ನು ನೀಡಲಾಗುತ್ತಿದೆ. ಮನುಷ್ಯರು ಪ್ರಾಣಿಗಳೊಂದಿಗೆ ಪ್ರೀತಿಯಿಂದ ಇರಬೇಕು. ಅವುಗಳನ್ನು ಹಿಂಸಿಸಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT