ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್.ಡಿ.ಕೋಟೆ: ನಾಗರಹೊಳೆಯಲ್ಲಿ ಯಶ್- ರಾಧಿಕಾ ದಂಪತಿ ಸಫಾರಿ

Published 20 ಜೂನ್ 2023, 6:49 IST
Last Updated 20 ಜೂನ್ 2023, 6:49 IST
ಅಕ್ಷರ ಗಾತ್ರ

ಎಚ್.ಡಿ.ಕೋಟೆ: ನಟ ಯಶ್, ಅವರ ಪತ್ನಿ ರಾಧಿಕಾ ಕುಟುಂಬವು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ದಮ್ಮನಕಟ್ಟೆ ವ್ಯಾಪ್ತಿಯಲ್ಲಿ ಸಫಾರಿ ಕೈಗೊಂಡು ವನ್ಯಜೀವಿಗಳನ್ನು ವೀಕ್ಷಿಸಿದರು.

ತಾಲ್ಲೂಕಿನ ದಮ್ಮನಕಟ್ಟೆ ಸಫಾರಿ ಕೇಂದ್ರಕ್ಕೆ ಮಂಗಳವಾರ ಇಬ್ಬರು ಮಕ್ಕಳು ಹಾಗೂ ರಾಧಿಕಾ ತಂದೆ-ತಾಯಿ ಜೊತೆಗೂಡಿ ಬಂದ ಯಶ್ ದಂಪತಿ ಜೀಪ್‌ನಲ್ಲಿ ಸಫಾರಿ‌ ನಡೆಸಿದರು. ಈ ವೇಳೆ ಆನೆ, ಜಿಂಕೆ, ಕರಡಿಗಳನ್ನು ಕಂಡು ಸಂಭ್ರಮಪಟ್ಟರು.

ನಂತರ ಕಬಿನಿ ಹಿನ್ನೀರಿನ ಬೀರಂಬಳ್ಳಿ ಗ್ರಾಮದ ಸಮೀಪ ಇರುವ ಆರೆಂಜ್‌ ಕೌಂಟಿ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದರು. ನಾಳೆ ಬೆಳಿಗ್ಗೆ ಅವರು ಅಲ್ಲಿಂದ ತೆರಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT