ಮೈಸೂರು: ಬಾಲಿವುಡ್ ತಾರಾ ದಂಪತಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಅವರ ನೂತನ ಮನೆಗೆ ಮೈಸೂರಿನಲ್ಲಿ ಗಣೇಶನ ಮೂರ್ತಿ ಸಿದ್ಧಗೊಂಡಿದ್ದು, ಶಿಲ್ಪಿ ಅರುಣ್ ಯೋಗಿರಾಜ್ ಮೂರ್ತಿಯ ಕೆತ್ತನೆ ಮಾಡಿದ್ದಾರೆ.

‘ಹೊಸ ಮನೆಯ ಪ್ರವೇಶ ದ್ವಾರದಲ್ಲಿ ಸ್ಥಾಪಿಸಲು ಆಲಿಯಾ ಭಟ್ ಗಣೇಶ ಮೂರ್ತಿಯನ್ನು ಕೆತ್ತಿಕೊಡುವಂತೆ ಕೇಳಿದ್ದರು. ಹೊಯ್ಸಳ ಹಾಗೂ ಮೈಸೂರು ಶೈಲಿಯಲ್ಲಿ ವಿಗ್ರಹವನ್ನು ಕೆತ್ತಲಾಗಿದೆ. ಮೂರು ಅಡಿಯ ಪೀಠವಿದ್ದು, 6 ಅಡಿ ಎತ್ತರವನ್ನು ಹೊಂದಿದೆ’ ಎಂದು ಶಿಲ್ಪಿ ಅರುಣ್ ಯೋಗಿರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅ.17ರಂದು ಆಲಿಯಾ ಭಟ್ ಕುಟುಂಬದವರು ಪೂಜೆ ಸಲ್ಲಿಸಲಿದ್ದಾರೆ. ಏಕಶಿಲಾ ಮೂರ್ತಿಯಾಗಿದ್ದು, 6 ತಿಂಗಳಿಂದ ನಿರಂತರವಾಗಿ ಕೆತ್ತನೆ ಕಾರ್ಯ ನಡೆದಿತ್ತು’ ಎಂದರು.

‘ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಮೂರ್ತಿಯ ಕೆತ್ತನೆ ಗಮನಿಸಿ ಅದೇ ಮಾದರಿಯ ಶಿಲೆಯಲ್ಲಿ ಗಣೇಶ ಮೂರ್ತಿ ಮಾಡಿಕೊಡುವಂತೆ ಕೇಳಿದ್ದರು. ಮುಂಬೈಗೆ ಕರೆಸಿಕೊಂಡು ಚರ್ಚಿಸಿದ್ದರು. ಮೂರ್ತಿ ಸಿದ್ಧವಾಗಿದ್ದು, ಅದನ್ನು ಸಾಗಿಸಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.