ಶಾಲೆಯ ತರಗತಿಗಳಲ್ಲಿ ವಾರದಲ್ಲಿ ಒಂದು ದಿನ ಮಾತ್ರ ಚಿತ್ರಕಲಾ ಪಾಠ ಇರುತ್ತದೆ. ಇಲ್ಲಿ ಪೇಂಟಿಂಗ್ ಡ್ರಾಯಿಂಗ್ ಶೇಡಿಂಗ್ ಕಲಿತಿರುವೆ. ನಿಸರ್ಗ ಚಿತ್ರಣವೆಂದರೆ ಇಷ್ಟ
ನಮನ್ ಈಸ್ಟ್‌ವೆಸ್ಟ್ ಶಾಲೆ
4 ವರ್ಷದಿಂದ ಬರುತ್ತಿರುವೆ. ಪ್ರತಿ ಬಾರಿಯೂ ಹೊಸತನ್ನು ಹೇಳಿಕೊಡುತ್ತಿದ್ದಾರೆ. ಎಲ್ಲ ಬಗೆಯ ಪೇಂಟಿಂಗ್ ಮಾಡುವೆ
ಲಿಖಿತಾ ಎಸ್‌ಡಿಎಂ ಕಾಲೇಜು
ಟಿ.ವಿ ಮೊಬೈಲ್ ಗೇಮ್‌ಗಳ ಬದಲು ಇಂಥ ಶಿಬಿರದಲ್ಲಿ ಪಾಲ್ಗೊಂಡರೆ ಒಳ್ಳೆಯ ಬೆಳವಣಿಗೆ ಆಗುತ್ತದೆ. ಮಗಳು ನಿನಾದಗಿದು 2ನೇ ಶಿಬಿರ
ಕಾಂತರಾಜು ಪೋಷಕರು
‘ಏಕಾಗ್ರತೆ ಕೌಶಲ ಸಿದ್ಧಿಸುತ್ತದೆ’
‘2006ರಲ್ಲಿ ಶಿಬಿರ ಆರಂಭಿಸಲಾಯಿತು. ಕೋವಿಡ್ ಕಾರಣ ಎರಡು ವರ್ಷ ಮಾಡಿರಲಿಲ್ಲ. ಆರಂಭದಲ್ಲಿ 25 ಮಕ್ಕಳಿದ್ದರು ಇದೀಗ 85 ವಿದ್ಯಾರ್ಥಿಗಳು ಬರುತ್ತಿದ್ದಾರೆ. ಚಿತ್ರಕಲೆ ಬರೆಯುವಾಗ ಏಕಾಗ್ರತೆ ಜೊತೆಗೆ ಕೌಶಲವೂ ಸಿದ್ಧಿಸುತ್ತದೆ’ ಎಂದು ಶಿಬಿರದ ಸಂಚಾಲಕ ಎಸ್.ಎಂ.ಜಂಬುಕೇಶ್ವರ ‘ಪ್ರಜಾವಾಣಿ’ಗೆ ತಿಳಿಸಿದರು. ‘1978ರಲ್ಲಿ ಕಾವಾ ವಿದ್ಯಾರ್ಥಿಗಳು ಮೈಸೂರಿನ ಕಲಾವಿದರು ಸೇರಿ ಚಿತ್ರಕಲಾ ಸಂಘ ಮಾಡಿಕೊಂಡಿದ್ದೆವು. ರಾಜೇಂದ್ರ ಸ್ವಾಮೀಜಿ ಅವರಿದ್ದಾಗ ಬಾಲಜಗತ್‌ನಲ್ಲಿಯೇ ಶಿಬಿರ ಆರಂಭಿಸಿ 1984ರವರೆಗೆ ನಡೆಸಿದ್ದೆವು. ಕಾರಣಾಂತರ ನಿಂತಿತ್ತು. ನಂತರ ಮತ್ತೆ ಆರಂಭಿಸಲಾಯಿತು’ ಎಂದು ನೆನೆಪಿಸಿಕೊಂಡರು. ‘ಜೆಎಸ್‌ಎಸ್ ಸಂಸ್ಥೆಯ ಚಿತ್ರಕಲಾ ಶಿಕ್ಷಕರೇ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ. ಅಕ್ರಿಲಿಕ್ ಪೇಂಟಿಂಗ್ ಬಟ್ಟೆಯ ಮೇಲಿನ ಎಂಬೋಸಿಂಗ್ ಪೇಟಿಂಗ್ ಮೊದಲಾದ ಪ್ರಕಾರಗಳನ್ನು ಕಲಿಸುತ್ತಿದ್ದಾರೆ. ಉಳಿದ ಬೇಸಿಗೆ ಶಿಬಿರಗಳಲ್ಲಿ ನಟನೆ ಅಭಿನಯ ಸಂಗೀತ ಚಿತ್ರಕಲೆ ಎಲ್ಲವನ್ನೂ ಕಲಿಸಲಾಗುತ್ತದೆ. ಇಲ್ಲಿ ಚಿತ್ರಕಲೆ ಮಾತ್ರವೇ ಕಲಿಸುವುದರಿಂದ ನುರಿತವರಾಗುತ್ತಾರೆ’ ಎಂದು ಹೇಳಿದರು.