ಮೈಸೂರು: ‘ಸಾಹಿತ್ಯದಲ್ಲಿ ರಾಜಕೀಯ ವಿಚಾರಗಳು, ಸಿದ್ಧಾಂತಗಳ ಪ್ರಸ್ತಾಪವಿರ ಬಾರದು ಎಂಬ ಧೋರಣೆ ಸರಿಯಲ್ಲ’ ಎಂದು ಭಾರತೀಯ ಸಂಜಾತ ಅಮೆರಿಕ ಲೇಖಕರಾದ ನವಾಜ್ ಅಹ್ಮದ್
ಪ್ರತಿಪಾದಿಸಿದರು.

ಮೈಸೂರು ಲಿಟರರಿ ಫೋರಂ ಚಾರಿಟಬಲ್ ಟ್ರಸ್ಟ್ ಮತ್ತು ಮೈಸೂರು ಬುಕ್ ಕ್ಲಬ್ ಜಂಟಿಯಾಗಿ ವರ್ಚ್ಯುವಲ್ ವೇದಿಕೆಯಲ್ಲಿ ಶನಿವಾರದಿಂದ ಆಯೋಜಿಸಿರುವ 5ನೇ ವರ್ಷದ ‘ಮೈಸೂರು ಸಾಹಿತ್ಯ ಉತ್ಸವ–2021’ರ ಉದ್ಘಾಟನೆ ಗೋಷ್ಠಿಯಲ್ಲಿ, ತಮ್ಮ ಕಾದಂಬರಿ ‘ರೇಡಿಯಂಟ್ ಫ್ಯುಗಿಟಿವ್ಸ್’ ಕುರಿತ ಸಂವಾದದಲ್ಲಿ ಅವರು ಮಾತ ನಾಡಿದರು.

‘ರಾಜಕಾರಣವೇ ಜೀವನದ ಚಾಲಕ ಶಕ್ತಿ. ರಾಜಕಾರಣ ನಮಗೆ ಒಗ್ಗದ್ದು ಎಂಬುವವರೇ ಅದರ ಪ್ರಭಾವಕ್ಕೆ ಒಳಗಾಗಿರುತ್ತಾರೆ. ನನ್ನ ಕಾದಂಬರಿಯ ಪಾತ್ರಗಳಲ್ಲೂ ರಾಜಕಾರಣವನ್ನು ನೋಡಬಹುದು. ಅಮೆರಿಕದ ರಾಜಕಾರಣದಲ್ಲಿ ಭಾರತೀಯ ಅಮರಿಕನ್ನರ ಚಿತ್ರಣವನ್ನು ಸೀಮಾ ಪಾತ್ರ ಕಟ್ಟಿಕೊಡು ತ್ತದೆ. ಅಮೆರಿಕದ ಅವಳಿ ಕಟ್ಟಡಗಳ ಕುಸಿತ, ಇರಾಕ್ ಯುದ್ಧ, ಅಫ್ಗಾನಿಸ್ತಾನ ದ ಯುದ್ಧಗಳು ರಾಜಕಾರಣದ ಭಾಗವೇ ಆಗಿವೆ’ ಎಂದರು.

‘2000ದ ನಂತರ ಅಮೆರಿಕದ ರಾಜಕಾರಣದಲ್ಲಿ ಭಾರತೀಯರ ಪ್ರಭಾವ ಹೆಚ್ಚಾಗಿದೆ. ಕಾದಂಬರಿಯ ಪಾತ್ರಗಳ ಮೂಲಕ ಅಮೆರಿಕದಲ್ಲಿ ಅಸ್ತಿತ್ವ ಕಂಡುಕೊಳ್ಳಲು ಹೋರಾಟ ನಡೆಸುತ್ತಿರುವ ಆಫ್ರಿಕಾ, ಭಾರತ ಉಪಖಂಡ, ಏಷ್ಯಾ ಮೂಲದವರ ಚಿತ್ರಣ ದಾಖಲಿಸಲಾಗಿದೆ. ಬರಾಕ್ ಒಬಾಮಾ ಅವರಿಗೆ ಅಧಿಕಾರವನ್ನು ಅಮೆರಿಕನ್ನರು ನೀಡಿದರೂ ಅದಕ್ಕೆ ಹಲವು ಮಿತಿಗಳನ್ನು ಹೇರಲಾಗಿತ್ತು’ ಎಂದರು.

ದಕ್ಷಿಣ ಏಷ್ಯಾ ಎಲ್‌ಜಿಬಿಟಿ ಸಮುದಾಯದ ಪ್ರತಿನಿಧಿಯೆಂದು ಹೇಳಿದ ನವಾಜ್, ‘ಅವಮಾನವನ್ನು ಮೀರಿದಾಗ ಮಾತ್ರ ಸಮುದಾಯ ಜೀವನವು ಸುಧಾರಣೆಯಾಗುತ್ತದೆ’ ಎಂದರು.

‘ಪ್ರೀತಿ ಹಾಗೂ ಧರ್ಮವು ವರ್ತಮಾನ ಹಾಗೂ ಭವಿಷ್ಯವನ್ನು ಪ್ರಭಾವಿಸುತ್ತದೆ. ಅದನ್ನು ಹೊರತಾದ ಜೀವನವನ್ನು ಕಲ್ಪಿಸಿಕೊಳ್ಳಲು ಆಗದು’ ಎಂದು ಹೇಳಿದರು. ಭಾರತೀಯ ಸಂಜಾತ ಅಮೇರಿಕಾ ಲೇಖಕಿ ಸೀತಾ ಭಾಸ್ಕರ್ ಸಂವಾದ ನಡೆಸಿಕೊಟ್ಟರು. ಲಿಟರರಿ ಫೋರಂ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಶುಭಾ ಸಂಜಯ್ ಅರಸ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.