ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿಗೆ ಬಿಹಾರ ಸಿಎಂ ನಿತೀಶ್‌ಕುಮಾರ್ ಭೇಟಿ

Published 21 ಮಾರ್ಚ್ 2024, 4:33 IST
Last Updated 21 ಮಾರ್ಚ್ 2024, 4:33 IST
ಅಕ್ಷರ ಗಾತ್ರ

ಮೈಸೂರು: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಬುಧವಾರ ನಗರಕ್ಕೆ ಬಂದು ವೈದ್ಯರೊಬ್ಬರನ್ನು ಭೇಟಿಯಾಗಿ ಆರೋಗ್ಯ ಸಲಹೆ ಪಡೆದರು.

‘ಬೆಳಿಗ್ಗೆ 11.15ರ ಸುಮಾರಿಗೆ ವಿಶೇಷ ವಿಮಾನದ ಮೂಲಕ ಬಂದ ಅವರು, ಖಾಸಗಿ ಕಾರಿನಲ್ಲಿ ನಗರದ ನಂಜುಮಳಿಗೆ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯೊಂದಕ್ಕೆ ತೆರಳಿದರು. ಅಲ್ಲಿ ನರರೋಗ ತಜ್ಞ ಜಿ.ಎಸ್. ಜನಾರ್ಧನ್‌ ಅವರನ್ನು ಭೇಟಿ ಮಾಡಿ ಆರೋಗ್ಯ ಸಲಹೆ ಪಡೆದರು. ಬಳಿಕ ವಿಶೇಷ ವಿಮಾನದಲ್ಲಿ ತೆರಳಿದರು’ ಎಂದು ಮೂಲಗಳು ತಿಳಿಸಿವೆ.

ಅವರಿಗೆ ರಾಜ್ಯಸಭಾ ಸದಸ್ಯ ಸಂಜಯ್‌ಕುಮಾರ್ ಝಾ ಸೇರಿದಂತೆ ಜೆಡಿಯು ಮುಖಂಡರು ಸಾಥ್‌ ನೀಡಿದರು. ಇದೊಂದು ಖಾಸಗಿ ಭೇಟಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT