‘ಸುಸ್ಥಿರ ಮಾರ್ಗಗಳ ಅಳವಡಿಕೆ ಅಗತ್ಯ’
ಮಾಜಿ ಮೇಯರ್ ಶಿವಕುಮಾರ್ ಮಾತನಾಡಿ ‘ಪ್ಲಾಸ್ಟಿಕ್ ಹಾಗೂ ಕಟ್ಟಡ ತ್ಯಾಜ್ಯದಿಂದ ಇಂಟರ್ ಲಾಕ್ ಟೈಲ್ಸ್‌ಗಳನ್ನು ಮಾಡುವ ಘಟಕವನ್ನು ಪಾಲಿಕೆ ಸ್ಥಾಪಿಸಬೇಕು. ಜಾಗೃತ್ ಟೆಕ್ ಕಂಪನಿಯ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದು ನನೆಗುದಿಗೆ ಬಿದ್ದಿದೆ’ ಎಂದರು. ‘ಇಂದೋರ್ ಸ್ವಚ್ಛ ನಗರಿಯಾಗಿ ಮುಂದುವರಿಯಲು ಅಲ್ಲಿನ ಪಾಲಿಕೆಯು ಸುಸ್ಥಿರ ಮಾರ್ಗಗಳನ್ನು ಅಳವಡಿಸಿಕೊಂಡಿದೆ. ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪಾದಿಸಿ ಸಾರಿಗೆ ಹಾಗೂ ಕೈಗಾರಿಕೆಗಳಿಗೆ ಬಳಕೆ ಮಾಡಲಾಗುತ್ತಿದೆ’ ಎಂದು ಉದಾಹರಿಸಿದರು. ‘ಸೀವೇಜ್ ಫಾರಂನಲ್ಲಿ 7 ಲಕ್ಷ ಟನ್ ತ್ಯಾಜ್ಯಕ್ಕೆ ಬೆಂಕಿ ಬಿದ್ದು ವಿಷಾನಿಲ ಹೊಮ್ಮಿದೆ. ವೈಜ್ಞಾನಿಕ ವಿಲೇವಾರಿಗೆ ಕೇಂದ್ರ ಸರ್ಕಾರ ₹60 ಕೋಟಿ ಅನುದಾನ ನೀಡಿದ್ದು ಬಳಕೆ ಆಗಬೇಕು’ ಎಂದರು.