ನಂಜನಗೂಡು: ‘ಏನ್ ನಿಮ್ಮ ಹೆಸರು? ವಾದ ಮಾಡುವುದಲ್ಲ;ಬಡವರ ಪರವಾಗಿ ಕೆಲಸ ಮಾಡಿ. ಮುಚ್ಕೊಂಡು ಕೂತ್ಕೊಳ್ಳಿ’ ಎಂದು ವರುಣಾ ಶಾಸಕ ಡಾ.ಯತೀಂದ್ರ ಸೆಸ್ಕ್ ಅಧಿಕಾರಿಯನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡರು.

ತಾಲ್ಲೂಕಿನ ತಗಡೂರು ಗ್ರಾಮ ಪಂಚಾಯಿತಿ ಕಟ್ಟಡ ಹಾಗೂ ಭಾಗ್ಯಲಕ್ಷ್ಮಿ ಯೋಜನೆಯಡಿಯ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಸೆಸ್ಕ್ ಎಇಇ ದೀಪಕ್ ಅವರ ವಿರುದ್ಧ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ರೇಗಾಡಿದರು. ಈ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

‘ಭಾಗ್ಯಲಕ್ಷ್ಮಿ ಯೋಜನೆಯಡಿ ಸಂಪರ್ಕ ಪಡೆದು, ಕೋಟ್ಯಂತರ ರೂಪಾಯಿ ಬಾಕಿ ಉಳಿಸಿಕೊಂಡಿದ್ದಾರೆ’ ಎಂದು ದೀಪಕ್ ಹೇಳುತ್ತಿದ್ದಂತೆ ಕೋಪಗೊಂಡ ಡಾ.ಯತೀಂದ್ರ, ‘ಬಾಯಿ ಮುಚ್ಚಿಕೊಂಡು ಹೇಳಿದಷ್ಟು ಕೇಳ್ರಿ. ಪಂಚಾಯಿತಿ ಹಾಗೂ ಸೆಸ್ಕ್ ಎರಡೂ ಸರ್ಕಾರದ ಭಾಗ. ನೀವೇನು ಖಾಸಗಿ ಕಂಪನಿ ಅಧಿಕಾರಿಯಲ್ಲ. ಅಧಿಕ ಪ್ರಸಂಗಿ. ಮೊದಲು ಬಡವರ ಪರ ಕೆಲಸ ಮಾಡಿ’ ಎಂದು ಹರಿಹಾಯ್ದರು.

‘ಕಾರ್ಖಾನೆ ಮಾಲೀಕರು ಕೋಟ್ಯಂತರ ರೂಪಾಯಿ ಬಾಕಿ ಉಳಿಸಿಕೊಂಡಿದ್ದಾರೆ. ನಿಮ್ಮನ್ನು ಅವರು ಕಾರ್ಖಾನೆ ಒಳಗೂ ಬಿಟ್ಟುಕೊಳ್ಳುವುದಿಲ್ಲ’ ಎಂದು ಏರುಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.